ಕಾಡುವ GEMSನ ನೆನಪು ಜೆಮ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದಲ್ಲಿ ನನಗಿಷ್ಟವಾಗಿದ್ದ ಚಾಕಲೇಟ್ ಅಂದರೆ ಅದು ಜೆಮ್ಸ್. ಅಮ್ಮ, ಅಪ್ಪ ಪೇಟೆಗೆ ಹೋಗುತ್ತಿದ್ದಾಗ, ನೆಂಟರಿಷ್ಟರು ಮನೆಗೆ ಬರುತ್ತಿದ್ದಾಗ ತಪ್ಪದೇ ಎರಡು ಪಾಕೆಟ್ ಜೆಮ್ಸ್ ತರುತ್ತಿದ್ದರು. ದುಂಡಗಿದ್ದ ಅದನ್ನು ನಾವು “ಚಾಕಿ ಮಾತ್ರೆ” ಎಂದು ಕರೆಯುತ್ತಿದ್ದೆವು. ಬೇಸಿಗೆ ರಜೆಯಲ್ಲಿ ಸೋದರ ಸಂಬಂಧಿಗಳು ಬಂದಾಗ ಸೋದರ ಸೋದರಿಯರಿಗೆ ಸಮವಾಗಿ ಹಂಚುವ ಜವಾಬ್ದಾರಿ ಹಿರಿಯವಳಾದ ನನ್ನದಾಗಿತ್ತು. ನಾವು ಐದಾರು ಜನ 2 ಪಾಕೆಟನ್ನು ಹಂಚಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೆವು. ಬಣ್ಣದ ಅನುಗುಣವಾಗಿ ಸಮಪಾಲು ಮಾಡುತ್ತಿದ್ದೆವು. ಗಣಿತ ಮೇಷ್ಟ್ರು ಬಹುಶಃ ನನಗೆ ಬೇಸಿಕ್ ಗಣಿತ ಹೇಳಿಕೊಟ್ಟ ಕೀರ್ತಿ ಜೆಮ್ಸಿಗೆ ಸಲ್ಲುತ್ತದೆ, ನಾವು ಬಣ್ಣದ ಅನುಗುಣವಾಗಿ ಜೆಮ್ಸ್ ಹಂಚುತ್ತಿದ್ದರೂ, ಕಿರಿಯರಿಗೆ ನಮ್ಮ ಪಾಲಿಂದ ತಲಾ ಒಂದು ಜೆಮ್ಸ್ ನೀಡಬೇಕಿತ್ತು. ಹೀಗಾಗಿ ಲೆಕ್ಕಾಚಾರದಲ್ಲಿ ಎಂದೂ ತಪ್ಪಾಗದಂತೆ ನೋಡಿಕೊಳ್ಳುವ ಪಾಳಿ ನನ್ನದಾಗಿತ್ತು. ಸಾಲದೆಂಬಂತೆ ಪೋಷಕರು ಬಂದಾಗ ಒಂದೋ ಎರಡೋ ಜೆಮ್ಸ್‍ನ್ನು ನಮ್ಮ ಪಾಲಿಂದ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ದೊಡ್ಡವಳಾದ ನನಗೆ ಸಿಗುತ್ತಿದ್ದ ಜೆಮ್ಸ್ 2-3 ಅಷ್ಟೇ. ದುಂಡಗಿದ್ದ ಜೆಮ್ಸನ್ನು ಚೀಪುತಿದ್ದ ನಾವು, ಒಳಗಿನ ಚಾಕಲೇಟ್ ಸಿಗುವವರೆಗೆ ನಾಲಗೆಗೆ ಕೆಲಸ ಕೊಡುತ್ತಿದ್ದೆವು. ಹೊರಗಿನ ಬಣ್ಣ ಕರಗಿದ ನಂತರ ಚಾಕಲೇಟ್‍ನ್ನು ಹೊರತೆಗೆದು ಕ...
CHIGURU is a platform for blooming writers to explore their creativity in the form of writings.