ಕಾಡುವ GEMSನ ನೆನಪು
ಜೆಮ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದಲ್ಲಿ ನನಗಿಷ್ಟವಾಗಿದ್ದ ಚಾಕಲೇಟ್ ಅಂದರೆ ಅದು ಜೆಮ್ಸ್. ಅಮ್ಮ, ಅಪ್ಪ ಪೇಟೆಗೆ ಹೋಗುತ್ತಿದ್ದಾಗ, ನೆಂಟರಿಷ್ಟರು ಮನೆಗೆ ಬರುತ್ತಿದ್ದಾಗ ತಪ್ಪದೇ ಎರಡು ಪಾಕೆಟ್ ಜೆಮ್ಸ್ ತರುತ್ತಿದ್ದರು. ದುಂಡಗಿದ್ದ ಅದನ್ನು ನಾವು “ಚಾಕಿ ಮಾತ್ರೆ” ಎಂದು ಕರೆಯುತ್ತಿದ್ದೆವು. ಬೇಸಿಗೆ ರಜೆಯಲ್ಲಿ ಸೋದರ ಸಂಬಂಧಿಗಳು ಬಂದಾಗ ಸೋದರ ಸೋದರಿಯರಿಗೆ ಸಮವಾಗಿ ಹಂಚುವ ಜವಾಬ್ದಾರಿ ಹಿರಿಯವಳಾದ ನನ್ನದಾಗಿತ್ತು. ನಾವು ಐದಾರು ಜನ 2 ಪಾಕೆಟನ್ನು ಹಂಚಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೆವು. ಬಣ್ಣದ ಅನುಗುಣವಾಗಿ ಸಮಪಾಲು ಮಾಡುತ್ತಿದ್ದೆವು.
ಗಣಿತ ಮೇಷ್ಟ್ರು
ಬಹುಶಃ ನನಗೆ ಬೇಸಿಕ್ ಗಣಿತ ಹೇಳಿಕೊಟ್ಟ ಕೀರ್ತಿ ಜೆಮ್ಸಿಗೆ ಸಲ್ಲುತ್ತದೆ, ನಾವು ಬಣ್ಣದ ಅನುಗುಣವಾಗಿ ಜೆಮ್ಸ್ ಹಂಚುತ್ತಿದ್ದರೂ, ಕಿರಿಯರಿಗೆ ನಮ್ಮ ಪಾಲಿಂದ ತಲಾ ಒಂದು ಜೆಮ್ಸ್ ನೀಡಬೇಕಿತ್ತು. ಹೀಗಾಗಿ ಲೆಕ್ಕಾಚಾರದಲ್ಲಿ ಎಂದೂ ತಪ್ಪಾಗದಂತೆ ನೋಡಿಕೊಳ್ಳುವ ಪಾಳಿ ನನ್ನದಾಗಿತ್ತು. ಸಾಲದೆಂಬಂತೆ ಪೋಷಕರು ಬಂದಾಗ ಒಂದೋ ಎರಡೋ ಜೆಮ್ಸ್‍ನ್ನು ನಮ್ಮ ಪಾಲಿಂದ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ದೊಡ್ಡವಳಾದ ನನಗೆ ಸಿಗುತ್ತಿದ್ದ ಜೆಮ್ಸ್ 2-3 ಅಷ್ಟೇ. ದುಂಡಗಿದ್ದ ಜೆಮ್ಸನ್ನು ಚೀಪುತಿದ್ದ ನಾವು, ಒಳಗಿನ ಚಾಕಲೇಟ್ ಸಿಗುವವರೆಗೆ ನಾಲಗೆಗೆ ಕೆಲಸ ಕೊಡುತ್ತಿದ್ದೆವು. ಹೊರಗಿನ ಬಣ್ಣ ಕರಗಿದ ನಂತರ ಚಾಕಲೇಟ್‍ನ್ನು ಹೊರತೆಗೆದು ಕೈ ಬೆರಳಲ್ಲಿ ಅದನ್ನು ಹಿಡಿದುಕೊಂಡು ಕಚ್ಚಿ ಕಚ್ಚಿ ತಿಂದು ಅದನ್ನು ಆಸ್ವಾದಿಸುತ್ತಿದ್ದೆವು.
ಕಲರ್ ಕಲರ್ ವಾಟ್ ಕಲರ್
“ಜೆಮ್ಸ್ ಎಂದರೆ ನನಗೆ ತುಂಬ ಇಷ್ಟವಿತ್ತು. ನನಗೆ ಪ್ರಿಯವಾದ ತಿಳಿಗೆಂಪು ಹಾಗೂ ಕಡುನೀಲಿ ಬಣ್ಣದ ಜೆಮ್ಸ್‍ಗಳನ್ನು ನಾನಿಟ್ಟುಕೊಂಡು ನನಗಾಗದ ಹಳದಿ ಹಾಗೂ ಹಸಿರು ಬಣ್ಣದ ಜೆಮ್ಸ್‍ಗಳನ್ನು ಅಣ್ಣನಿಗೆ ಕೊಡುತ್ತಿದ್ದೆ” ಎಂದು ಜೆಮ್ಸಿನ ನೆನಪುಗಳ ಮೆಲುಕು ಹಾಕಿಕೊಂಡಳು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಶಾಂಭವಿ. ಕಲರ್ ವಿಚಾರದಲ್ಲಿ ಆಗುತ್ತಿದ್ದ ಜಗಳದ ಬಗ್ಗೆ ಪ್ರಸ್ತಾಪಿಸಿದ ಗೆಳತಿ ಲಿಖಿತಾ, “ಈಗಲೂ ಅಂಗಡಿಯಿಂದ ಜೆಮ್ಸ್ ಕೊಂಡು ತಿನ್ನುತ್ತೇನೆ” ಎಂದಳು.
ನೆನಪಿನ ಸಾಗರಕ್ಕೆ ಒಯ್ದ ಮೇಷ್ಟ್ರು
ಜೆಮ್ಸಿನ ನೆನಪನ್ನು ನೆನಪಿಸಿದ್ದು ಐಚ್ಛಿಕ ಆಂಗ್ಲ ಭಾಷಾ ತರಗತಿಯಲ್ಲಿ, ನಮ್ಮ ಪ್ರೀತಿಯ ಮೇಷ್ಟ್ರು ಸೂರ್ಯನಾರಾಯಣ ಭಟ್. ಅದು ಹೇಗೆ ಅಂತೀರಾ? ನಮ್ಮ ಮೇಷ್ಟ್ರಿನ ಜನ್ಮದಿನದಂದು ವಿಶ್ ಮಾಡಿ ಟ್ರೀಟ್ ಕೇಳಿದಾಗ ತರಗತಿಯಲ್ಲಿದ್ದ ನಮಗೆಲ್ಲರಿಗೂ ಸಿಕ್ಕಿದ್ದು ಜೆಮ್ಸ್! ಬೆಂಚಿಗೆ ತಲಾ ಒಂದು ಪಾಕೆಟ್ ನೀಡಿದ ಸರ್, ಅದನ್ನು ಎಲ್ಲರೂ ಸಮವಾಗಿ ಹಂಚುವಂತೆ ಹೇಳಿದರು. ಬಾಲ್ಯದ ಕ್ಷಣಗಳನ್ನು ನೆನೆಸುತ್ತಾ ಸಂತೋಷದಿಂದ ಜೆಮ್ಸನ್ನು ಚಪ್ಪರಿಸಿಕೊಂಡು ತಿಂದೆವು.
ಪ್ರಜ್ಞಾ ಹೆಬ್ಬಾರ್

Comments
Post a Comment