ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!
"HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್.
ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈದಳು ಎಂಬ ಜಿಜ್ಞಾಸೆ ನನ್ನದಾಗಿತ್ತು.

ನಂತರ ವಿಚಾರ ಮಾಡಿದಾಗ ಗೊತ್ತಾಯಿತು. ಅಳಬೇಡ ಎಂದು ನಾನು ಹೇಳಿದ್ದನ್ನು. ಅವಳು ಕಿರುಚಬೇಡ ಅಂತ ಅರ್ಥ ಮಾಡಿಕೊಂಡಿದ್ದಳು. ಮಂಗಳೂರು ಭಾಷೆಯಲ್ಲಿ ಕೂಗಬೇಡ ಎಂದರೆ ಅಳಬೇಡ ಎಂರ್ಥ. ಅದೇ ಬೇರೆ ಕಡೆ ಕೂಗುವುದು ಅಂದರೆ ಅರಚೋದು ಎಂದರ್ಥ. ಅಂತು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರಿದ ನನಗೆ, ವಿವಿಧ ಭಾಗಗಳ ಭಾಷಾ ವೈವಿಧ್ಯವನ್ನು ಸವಿಯಲು ಸಾಧ್ಯವಾಯಿತು.
ಪ್ರಜ್ಞಾ ಹೆಬ್ಬಾರ್
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು, ಉಜಿರೆ
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು, ಉಜಿರೆ
Thumba chanagi bardidera.. nijavaglu Hagi ansuthe aduki ... Navu hostel bettu bandu 4 varsha Kalithu nijvaglu thumba nenpu ... Matte ade jevana ki hogoda antha ansuthe... We miss it college and hostel life 😢
ReplyDelete