Skip to main content

ಸೇಡು

ಸೇಡು

ಒಂದು ದಿನ ಬೆಳಿಗ್ಗೆ ಯಾವುದೇ ಕ್ಲಾಸ್ ಇಲ್ಲದೆ, ರೂಮ್‌ಗೆ ಹೋಗುವುದಕ್ಕೆ ಮನಸ್ಸು ಸಹ ಇಲ್ಲದೆ ಪೇಚಾಡಿ-ಪೇಚಾಡಿ ಲೈಬ್ರರಿಗೆ ಹೋಗುವುದೆಂದು ನಿರ್ಧರಿಸಿ ನಾನು ನನ್ನ ಫ್ರೆಂಡ ಲೈಬ್ರರಿಕಡೆ ಮುಖ ಮಾಡಿದೆವು. ಆಕ್ಷಣ ಕನ್ನಡದ ಒಂದು ಪದ್ಯದ ಮೇಲೆ ಬರೆಯುವುದಕ್ಕೆ ಹೇಳಿದ್ದ ಒಂದು ssಪ್ರಬಂಧದ ನೆನಪಾಯಿತು. ಸರಿಹಾಗಾದರೆ ಅದನ್ನೆ ಬರಿಯೋಣ ಎಂದು ಕನ್ನಡ ಬುಕ್ ಜೊತೆಗೆ ನಾಲಕ್ಕು ಬಿಳಿ ಹಾಳೆಗಳನ್ನು ತೆಗೆದುಕೊಂಡು ಲೈಬ್ರರಿಯ ಒಳಗೆ ಎಂಟ್ರಿ ಆದೆ.
      ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಸೆಮಿಸ್ಟರ್‌ಗೆ ೪೦ ತಾಸು ಲೈಬ್ರರಿ ಬಳಸಬೇಕೆಂಬ ಕಡ್ಡಾಯ ನೀತಿ ಇತ್ತು. ಇದೇ ಕಾರಣ ಯಾರು ಯಾರು ಎಷ್ಟು ಲೈಬ್ರರಿ ಹವರ್ ಮಾಡಿದ್ದಾರೆಂದು ಲೆಕ್ಕ ಹಿಡಿಯುವುದಕ್ಕೆ ನಮ್ಮ ಐಡಿ ಕಾರ್ಡ್‌ಗಳಲ್ಲಿ ಬಾರ್‌ಕೋಡ್ ಅಳವಡಿಸಿದ್ದರು. ಇದನ್ನು ಸ್ಕಾನ್ ಮಾಡುವುದಕ್ಕೆ ಲೈಬ್ರರಿ ದ್ವಾರದಲ್ಲಿ ಬಾರ್‌ಕೋಡ್ ಸ್ಕಾನರ್ ಇತ್ತು. ಇಲ್ಲಿ ಸ್ಕಾನ್ ಮಾಡಿ ನಾವು ಒಳಗೆ ಒಯ್ಯುತಿರುವ ವಸ್ತುವನ್ನು ಪರಿಶೀಲಿಸಿ ಅಪ್ಪಣೆ ಕೊಡುತಿದ್ದರು. ನನಗೆ ಇಲ್ಲಿ ಒದಗಿ ಬಂದ ಬಿಕ್ಕಟ್ಟೆಂದರೆ ಪ್ರಿಂಟೆಡ್ ಬುಕ್ ಒಳಗೆ ತೆಗೆದುಕೊಂಡು ಹೋಗಲು ಸ್ಕಾನರ್ ಬಳಿ ಕುಳಿತಿದ್ದ ರಮೇಶ್ ಸರ್ ಬಿಡಲೇ ಇಲ್ಲ. ಒಳಗಡೆ ಈ ಬುಕ್‌ನ ಬೇರೆ ಪ್ರಿಂಟ್ ಇರಲಿಲ್ಲ. ಹಾಗಾಗಿ ನನಗೆ ಆ ಬುಕ್ ಒಳಗೆ ತೆಗೆದುಕೊಂಡು ಹೋಗದೆ ಬೇರೆವಿಧಿಯೇ ಇರಲಿಲ್ಲ. ಹೇಗಾದರು ಮಾಡಿ ಒಳಗೆ ತೆಗೆದುಕೊಂಡು ಹೋಗಲೇಬೇಕಾಗಿತ್ತು. ರಮೇಶ್ ಸರ್ ಅನ್ನು ಒಂದೆರಡು ಬಾರಿ ಬೇಡಿಕೊಂಡೆ ಏನೆಂದರು ಜಗ್ಗಲಿಲ್ಲ. ಸರಿ ಏನು ಮಾಡುವಂತಿಲ್ಲವೆಂದು ಅನ್ನಿಸಿದಾಗ ಬ್ಯಾಗ್ ಬಳಿ ಬಂದು ಪುಸ್ತಕ ಒಳ ಸೇರಿಸುತ್ತ ಆ ಕಡೆ ನೋಡಿದೆ......ಅರೆ.....ಆಗ.......ಆಗದ್ದು ಈಗ ಹೇಗೆ ಸಾಧ್ಯವಯಿತು......ನನಗೆ ಆಗ ಆ ಪುಸ್ತಕವನ್ನು ಒಳಗೆ ತೆಗೆದುಕೊಂಡು ಹೋಗಲು ಬಿಡದವ ಈಗ ಹೇಗೆ ಆ ಹುಡುಗರಿಗೆಲ್ಲಾ ಬಿಡುತ್ತಿದ್ದಾನೆ. ಒಮ್ಮೆ ತಲೆ ತುರಿಸಿಕೊಂಡೆ. ಹಾಂ....... ನೆನಪಿಗೆ ಬಂತು, ಅದೊಂದು ದಿನ ನನ್ನ ಕ್ಯಾಮೆರಾ ತೆಗೆದುಕೊಂಡು ಲೈಬ್ರರಿ ಒಳಗೆ ಹೋಗಿ ಅಲ್ಲಿ ಕುಳಿತಿದ್ದ ಒಬ್ಬರ ಕೈಯಲ್ಲಿ ಕೊಟ್ಟು ಆಮೇಲೆ ಬಂದು ತೆಗೆದುಕೊಳ್ಳುತ್ತೆನೆಂದು  ಹೇಳಿ ಪುಸ್ತಕ ಓದಲು ಹೋದೆ. ರಾತ್ರಿ ಎಂಟು ಗಂಟೆ ಹೊರಬಂದವನು ಹುಡುಗರ ಜೊತೆ ಮಾತಾಡುತ್ತಾ ಕ್ಯಾಮೆರಾ ಹಿಂಪಡೆಯುವುದನ್ನೇ ಮರೆತುಬಿಟ್ಟಿದ್ದೆ. ಸರಿ ಮರುದಿನ ಹೋಗಿನೋಡುವಷ್ಟರಲ್ಲಿ. ನಾನು ಯಾರ ಬಳಿ ಕ್ಯಾಮೆರಾ ಕೊಟ್ಟಿದ್ದೆನೊ ಅವರ ಬದಲು ರಮೆಶ್‌ಸರ್ ಇದ್ದರು ನಾನು ಕೇಳುತ್ತಿದ್ದಂತೆ ಹಿಂದೆಮುಂದೆ ನೋಡದೆ ಕೊಟ್ಟುಬಿಟ್ಟರು. ಇದೇ ಕಾರಣಕ್ಕೆ ಮರುದಿನ ಪಾಪ ಅವರಿಗೆ ಮಂಗಳಾರತಿ ನಡೆದಿತ್ತು........
     ಇದೇ ಸೇಡನ್ನು ನನ್ನ ಮೇಲೆ ತೀರಿಸಿಕೊಳ್ಳಲು ಈ ರೀತಿ ಪುಸ್ತಕ ಒಳಬಿಡದೆ ಆಡಿಸುತ್ತಿದ್ದರು. ಎಷ್ಟಾಯಿತಲ್ಲ ಈಗ ಸೇಡಿಗಾದರೂ ಒಳಗೆ ಪುಸ್ತಕ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಿ ಒಂದು ದೊಡ್ಡ ಡೈರಿಯ ಒಳಗೆ ನಿಧಾನವಾಗಿ ಇದನ್ನು ಇಳಿಸಿ ಒಳಹೊಕ್ಕೆ.
    ನನ್ನ ಬಾರ್‍ಕೋಡ್ ಸ್ಕ್ಯಾನ್ ಆಯಿತು ಹೋಗಿ ಕುರ್ಚಿಯ ಮೇಲೆ ಕುಳಿತೆ. ಇನ್ನೂ ಕೂಡ ಸ್ಕ್ಯಾನರ್ ಇದ್ದ ಕಡೆಯಿಂದ ಇನ್, ಔಟ್, ಇನ್, ಔಟ್, ಔಟ್, ಇನ್ ಎಂಬ ಶಬ್ದ ಬರುತ್ತಲೇ ಇತ್ತು. ಅಲ್ಲಿನ ಒಂದು ’ಇನ್’ ಜೊತೆ ಒಳಬಂದ ಗೆಳೆಯ ಮಗ ಕನ್ನಡ ಸರ್ ಬಂದಿಲ್ಲ ಕಣೊ ಪಿಪಿಟಿ ನಾಡಿದ್ದಿಗೆ ಪೋಸ್ಟಪೋನ್ ಆಗಿದೆ ಎಂದ. ಒಂದು ಕಡೆ ಆನಂದವಾದರೆ, ಸೇಡಿಗೋಸ್ಕರ ಪುಸ್ತಕ ಒಳಗೆ ತಂದಿದ್ದು ವ್ಯರ್ಥವಾಯಿತಲ್ಲ ಎಂದು ಬೇಸರವಾದರೆ, ಈಗ ಹೊರಗೆ ಹೇಗೆ ತಗೊಂಡು ಹೋಗೋದು ಎಂಬ ???? ಹುಟ್ಟಿತು.  
SAMPADA S BHAGAVATH
SECOND YEAR JOURNALISM
CONTACT NO:7760396839

Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

wow! yummy

          ವಾ.... ಇಡ್ಲಿ  ವಡೆ ಸಾಂಬಾರ್ ಇಡ್ಲಿ-ವಡೆ ಸಾಂಬರ್ ಆಹಾ ನೆನೆಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ......ಅಬ್ಬಾ ಎಂತಹ ಕಾಂಬಿನೇಷನ್ ಅಲ್ವಾ , ಇಡ್ಲಿ ಮತ್ತೆ ವಡೆಯದ್ದು. ಯಾವುದೇ ಸಮಾರಂಭ ಆದರೂ ಮೊದಲಿಗೆ ನೆನಪಾಗುವುದು ಇಡ್ಲಿ ವಡೆ. ಯಾವ ಫಾಸ್ಟ್-ಫುಡ್ ತಿಂಡಿಯ ಮುಂದೆ ಇಡ್ಲಿಗೆ ಸರಿಸಾಟಿ ಯಾವುದೂ ಇಲ್ಲ. ಅಬ್ಬಾ ಅದರ ರುಚಿ ನೆನೆಸಿಕೊಂಡರೆ ನಾಲಿಗೆ ನೀರೂರುತ್ತದೆ.   ಇಡ್ಲಿಯನ್ನು , ವಡೆಯನ್ನು ಸೇರಿಸಿ ಅದಕ್ಕೆ ಸಾಂಬಾರ್ ಹಾಕಿ ಮಿಕ್ಸ್ ಮಾಡಿ ತಿಂದ್ರಂತೂ , ಆಹಾ  ಯಾವ ಅಮೃತಕ್ಕೂ ಕಡಿಮೆ ಇಲ್ಲಾ. ಈಗಲೂ ಅದೆಷ್ಟೋ ಜನರಿದ್ದಾರೆ ಹೋಟೆಲಿಗೆ ಹೋಗಿಯೇ ಇಡ್ಲಿ-ವಡೆ ತಿನ್ನುವವರು. ನಾನು ಮನೆಗೆ ಹೋಗುವಾಗ ಮನೆ ಹತ್ತಿರದ ಹೋಟೆಲಿನ ಇಡ್ಲಿ-ವಡೆಯ ಪರಿಮಳವೂ ನೇರವಾಗಿ ನನ್ನನ್ನು ಹೋಟೆಲ್ ಬಳಿಗೆ ಕಳಿಸುವಂತೆ ಮಾಡುತ್ತದೆ.     ಕಿಲಾಡಿ-ಜೋಡಿ ಅವಾರ್ಡ ಏನಾದರೂ ಮಾಡಿದ್ರೆ ಅದು ಇಡ್ಲಿ-ವಡೆಗೆಯೇ ಸಿಗುತ್ತದೆ. ಯಾಕಂದ್ರೆ ನೀವು ಯಾವ ನೂಡಲ್ಸ್ , ಸಾಸ್ , ಪಿಝ್ಝ , ಬರ್ಗರ್ , ಬೇಕಾದ್ರು ತಿನ್ನಿ ಅದರಲ್ಲಿ ನಿಮಗೆ ಸಿಗುವ ತೃಪ್ತಿಗಿಂತ ಬರೀ ಇಡ್ಲಿ- ವಡೆಯ ಸ್ವಾದವೇ ಬೇರೆ. ಅಷ್ಟೇ ಅಲ್ಲ ಇಡ್ಲಿ-ವಡೆ ಬಂದಿರುವುದು ನಮ್ಮ ಪೂರ್ವಕಾಲದಿಂದ. ಮನೆಯಲ್ಲೇ ತಯಾರು-ಮಾಡಿ ತಿನ್ನಬಹುದಾದಂಥದ್ದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಷ್ಟು ರುಚಿಯೋ ಅಷ್...