Skip to main content

write up about friendship

                 
               ಭೇಧವಿರದ ಬಾಂಧವ್ಯದ ಬೆಸುಗೆ......

.
    ಈಗಿನ ಕಾಲದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಮ್ಮರವಾಗ್ತಾ ಇದೆ.ಇಂಥಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ,ಕೇವಲ ಸ್ಪರ್ಧೆಯಾಗಿ ಉಳಿದಿಲ್ಲ.ನಾನು ಮುಂದೆ ಬರಬೇಕು ಅನ್ನೊ ಸ್ವಾಭಿಮಾನಕ್ಕಿಂತ,ಬೇರೆಯವರನ್ನ ಹೇಗೆ ಹಿಂದೆನೇ ತಳ್ಳಬೇಕು ಅನ್ನೋ ಸ್ವಾರ್ಥ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.ಇದರಿಂದ ಗೆಳೆತನ,ಹಗೆತನಕ್ಕೆ ತಿರಗ್ತಾ ಇದೆ.ನಮ್ಮ- ನಮ್ಮಲ್ಲಿನ ಸ್ಪರ್ಧೆ "ನನ್ನ" ಜೊತೆಗೆ ಇತರರನ್ನೂ ಬೆಳೆಸ್ಬೇಕೆ ಹೊರತು,ಇಂತಹ ಋಣಾತ್ಮಕ ಸ್ಪರ್ಧೆಯಿಂದ "ನನ್ನವರನ್ನ" ಕಳಕೊಳೊ ಹಾಗೆ ಮಾಡಬಾರದು.
      ಇಲ್ಲೊಂದು ಪುಟ್ಟ ಕಥೆ ಇದೆ. ೪ ಜನ ಬೆಸ್ಟ್ ಫ್ರೆಂಡ್ಸ್‌ಗಳ ತಮ್ಮದೇ ಸುಂದರವಾದ ಪುಟ್ಟ ಜಗತ್ತು. ನಾಲ್ಕೂ ಜನರೂ ತಮ್ಮದೇ ರೀತಿಯಲ್ಲಿ ಭಿನ್ನವಾಗಿದ್ದಾರೆ.ಒಬ್ಬಳು ತುಂಬಾ ಚೆಂದವಾಗಿ ಹಾಡ್ತಾಳೆ. ಡೀಸೆಂಟ್ ಹುಡುಗಿ. ಇನ್ನೊಬ್ಬ ಕಂಪ್ಯೂಟರ್, ಮೊಬೈಲ್‌ಗಳ ಎಲ್ಲಾ ಚಿಠಿಠಿsಗಳನ್ನ ಅರಿದು ಕುಡಿದಿದಾನೆ, ಹಾಗೆನೇ ಅಂದವಾಗಿ ಪೇಂಟಿಂಗ್ ಕೂಡಾ ಮಾಡ್ತಾನೆ.ಈ ಗುಂಪಿನ ಟೆಕ್ನಿಷಿಯನ್.ಅವನೊಬ್ಬ ಇದಾನೆ ಅದ್ಭುತ ಮಾತುಗಾರ, ತುಂಬಾ ತೀಕ್ಷ್ಣವಾಗಿ ಬರಿತಾನೆ. ಕಾಲೇಜಿನ ಬೆಸ್ಟ್ ಡಿಬೇಟರ್. ಮತ್ತೊಬ್ಬಳು ರಾಜಕೀಯ ಚಿಂತಕಿ.ಎಲ್ಲಾ ಪ್ರಸಕ್ತ ಪ್ರಸ್ತುತ ವಿಷಯಗಳು ಅವಳ ಮಸ್ತಕದಲ್ಲಿ ಫೀಡ್ ಆಗಿರತ್ತೆ.
       ವಿಷಯ ಏನಪ್ಪಾ ಅಂದ್ರೆ ಏನೇ ಕಾಂಪಿಟಿಷನ್ ಆದ್ರೂ ಟಫ್ ಫೈಟ್
ಇರೋದು ಈ ನಾಲ್ಕು ಜನರ ಮಧ್ಯದಲ್ಲೇ......sಚರ್ಚಾ ಸ್ಪರ್ಧೆ,ಭಾಷಣ, ಫೋಟೋಗ್ರಫಿ
 ಯಾವುದೇ ವಿಷಯದಲ್ಲೂ ಇವರ ನಡುವೆ ಕಿತ್ತಾಟ ಇದ್ದಿದ್ದೇ. ಸ್ಪರ್ಧೆಯ
ವಿಷಯ ಬಂದಾಗ ಇವರು ತಮ್ಮದೇ ರೀತಿಯಲ್ಲಿ ತಯಾರಾಗಿ, ಮೊದಲನೇ ಬಹುಮಾನ ಯಾರು ತಗೋತಾರೋ ಅನ್ನೋ ಪೈಪೋಟಿಲೂ ಇರ್‍ತಾರೆ.
       ಈ ಗೆಳೆತನದ ವಿಶೇಷತೆ ಅಂದ್ರೆ  ಸ್ಪರ್ಧೆಯನ್ನ ಸ್ಪರ್ಧೆಯಲ್ಲೇ  ಮುಗಿಸಿಬಿಡ್ತಾರೆ.ಆ ವಿಷಯದಲ್ಲಿ ಒಬ್ಬರಿಗೊಬ್ರು ಬಿಟ್ಟುಕೊಡಲ್ಲ,ಆದರೆ ಸ್ಪರ್ಧೆಯನ್ನು
ಅದರಿಂದಾಚೆಗೆ ಗೆಳೆತನದ ಪ್ರೀತಿಯ ಕೊಂಡಿಯೊಳಗೆ ನುಸುಳಿಹೋಗೋಕೆ ಬಿಡಲ್ಲ.ಒಬ್ಬರಿಗೊಬ್ರು ತುಂಬಾ ಸಪೋರ್ಟಿವ್ ಆಗಿರ್‍ತಾರೆ.ಅವನಿಗೆ ಮಾಡೆಲ್ ಮೇಕಿಂಗ್ ಇದೆ ಅಂದ್ರೆ ಇವಳು ತನೆಗೇ ಕಾಂಪಿಟೆಷಿನ್ ಇದೆಯೇನೋ ಅನ್ನೋ ರೀತಿಲೀ ಸಹಾಯ
   ಮಾಡ್ತಾಳೆ.ಮತ್ತೊಬ್ಬಳಿಗೆ ಪ್ರಾಜೆಕ್ಟ್ ಇದೆ ಅಂದ್ರೆ ಅವನು ಪ್ರೀತಿಯಿಂದ      ಮಾಡಿಕೊಡ್ತಾನೆ.ಒಬ್ಬರ  ಕೆಲಸವನ್ನ ಎಲ್ರೂ ಸೇರಿ ಮಾಡ್ತಾರೆ. ಕಾಂಪಿಟೆಷನ್‌ನಲ್ಲಿ ನಾನೇ ಗೆಲ್ಲಬೇಕು ಅಂತಿದ್ರೂ ಕೂಡ ಸ್ಪರ್ಧೆಯ ಬೆಳಗ್ಗೆನ ದಿನ ಬಂದು  ವಿಷಸ್ ಹೇಳ್ಕೊತಾರೆ.     ಪರೀಕ್ಷೆ ಹಿಂದಿನ ದಿನವೂ ಪಾರ್ಟಿ, ಪರೀಕ್ಷೆ ಮುಗಿದ ದಿನನೂ ಪಾರ್ಟಿ.ಸ್ಪರ್ಧೆಯಲ್ಲಿ ಶುದ್ಧ ವೈರಿಗಳು ಅನ್ನೋ ಹಾಗೆ ಭಾಗವಹಿಸಿರ್‍ತಾರೆ,ಅಲ್ಲಿಂದ ಹೊರಗೆ ಬಂದ್ ತಕ್ಷಣ ಅವರಲ್ಲಿ ಯಾರಿಗೇ ಬಹುಮಾನ ಬಂದ್ರೂ ಹುಚ್ಚರ ಹಾಗೆ ಸಂಭ್ರಮಿಸ್ತಾರೆ.ಈ ಗೆಳೆತನದಲ್ಲಿ ನಾನು ಬೆಳೆಯಬೇಕು ಅನ್ನೋ ಛಲ ಇದೆಯೇ ಹೊರತು ಬೇರೆಯವರು ಮೇಲೆಬರಬಾರದು ಅನ್ನೋ ಹೊಟ್ಟೆಕಿಚ್ಚಿಲ್ಲ.
        ಎಷ್ಟೋ ಸ್ನೇಹ,ಪ್ರೀತಿಗಳಲ್ಲಿ ಈ ಕಾಂಪಿಟೆಷನ್  ಅನ್ನೋ "ಅಹಂಕಾರ"ದ ಭೂತ ಸೇರಿಕೊಂಡು,ಮುಕ್ತ ಸಂಬಂಧಗಳನ್ನ ನಾಶಮಾಡಿದೆ.ಜೀವನದಲ್ಲಿ "ಸ್ಪರ್ಧೆ"ಗಳು ಬಹು
ಮುಖ್ಯ ಪಾತ್ರ ವಹಿಸುತ್ತವೆ.ಸ್ಪರ್ಧೆ ಇಲ್ಲದೆ ಬದುಕಿಲ್ಲ.ಹಾಗಂತ ನಾವು ಸ್ಪರ್ಧೆಗಳನ್ನೇ ಜೀವನವಾಗಿಸ್ಕೋಳಕೆ ಸಾಧ್ಯವಿಲ್ಲ.ಸ್ಪರ್ಧೆಗಳು ಆರೋಗ್ಯಕರವಾಗಿರಲಿ,ಧನಾತ್ಮಕವಾಗಿರಲಿ,ಹಾಗೆಯೇ
ನಮ್ಮನ್ನ ಬೆಳವಣಿಗೆಯತ್ತ ಕೊಂಡೊಯ್ಯಲಿ.......
ಲಾವಣ್ಯ ಎನ್.ಕೆ.
ತೃತೀಯ ಬಿ.ಎ
                                                                                           



Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

wow! yummy

          ವಾ.... ಇಡ್ಲಿ  ವಡೆ ಸಾಂಬಾರ್ ಇಡ್ಲಿ-ವಡೆ ಸಾಂಬರ್ ಆಹಾ ನೆನೆಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ......ಅಬ್ಬಾ ಎಂತಹ ಕಾಂಬಿನೇಷನ್ ಅಲ್ವಾ , ಇಡ್ಲಿ ಮತ್ತೆ ವಡೆಯದ್ದು. ಯಾವುದೇ ಸಮಾರಂಭ ಆದರೂ ಮೊದಲಿಗೆ ನೆನಪಾಗುವುದು ಇಡ್ಲಿ ವಡೆ. ಯಾವ ಫಾಸ್ಟ್-ಫುಡ್ ತಿಂಡಿಯ ಮುಂದೆ ಇಡ್ಲಿಗೆ ಸರಿಸಾಟಿ ಯಾವುದೂ ಇಲ್ಲ. ಅಬ್ಬಾ ಅದರ ರುಚಿ ನೆನೆಸಿಕೊಂಡರೆ ನಾಲಿಗೆ ನೀರೂರುತ್ತದೆ.   ಇಡ್ಲಿಯನ್ನು , ವಡೆಯನ್ನು ಸೇರಿಸಿ ಅದಕ್ಕೆ ಸಾಂಬಾರ್ ಹಾಕಿ ಮಿಕ್ಸ್ ಮಾಡಿ ತಿಂದ್ರಂತೂ , ಆಹಾ  ಯಾವ ಅಮೃತಕ್ಕೂ ಕಡಿಮೆ ಇಲ್ಲಾ. ಈಗಲೂ ಅದೆಷ್ಟೋ ಜನರಿದ್ದಾರೆ ಹೋಟೆಲಿಗೆ ಹೋಗಿಯೇ ಇಡ್ಲಿ-ವಡೆ ತಿನ್ನುವವರು. ನಾನು ಮನೆಗೆ ಹೋಗುವಾಗ ಮನೆ ಹತ್ತಿರದ ಹೋಟೆಲಿನ ಇಡ್ಲಿ-ವಡೆಯ ಪರಿಮಳವೂ ನೇರವಾಗಿ ನನ್ನನ್ನು ಹೋಟೆಲ್ ಬಳಿಗೆ ಕಳಿಸುವಂತೆ ಮಾಡುತ್ತದೆ.     ಕಿಲಾಡಿ-ಜೋಡಿ ಅವಾರ್ಡ ಏನಾದರೂ ಮಾಡಿದ್ರೆ ಅದು ಇಡ್ಲಿ-ವಡೆಗೆಯೇ ಸಿಗುತ್ತದೆ. ಯಾಕಂದ್ರೆ ನೀವು ಯಾವ ನೂಡಲ್ಸ್ , ಸಾಸ್ , ಪಿಝ್ಝ , ಬರ್ಗರ್ , ಬೇಕಾದ್ರು ತಿನ್ನಿ ಅದರಲ್ಲಿ ನಿಮಗೆ ಸಿಗುವ ತೃಪ್ತಿಗಿಂತ ಬರೀ ಇಡ್ಲಿ- ವಡೆಯ ಸ್ವಾದವೇ ಬೇರೆ. ಅಷ್ಟೇ ಅಲ್ಲ ಇಡ್ಲಿ-ವಡೆ ಬಂದಿರುವುದು ನಮ್ಮ ಪೂರ್ವಕಾಲದಿಂದ. ಮನೆಯಲ್ಲೇ ತಯಾರು-ಮಾಡಿ ತಿನ್ನಬಹುದಾದಂಥದ್ದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಷ್ಟು ರುಚಿಯೋ ಅಷ್...