Skip to main content

write up

ಮನಸ್ಸರಳಿಸುವ ಮನೀಷಾ

ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಂದರೆ ಅದು ಅವಕಾಶಗಳ ಸಾಗರವಿದ್ದಂತೆ. ಇಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಭಿವ್ಯಕ್ತ ಪಡಿಸಲು ಅನೇಕ ಅವಕಾಶಗಳಿವೆ. ಅದರಲ್ಲಿ ಬಹಳ ಪ್ರಮುಖವೆಂದರೆ ಕಾಲೇಜಿನ ಎಲ್ಲ ಕಾರ್ಯಚಟುವಟಿಕೆಗಳನ್ನು, ವಿದ್ಯಾರ್ಥಿ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವುದರ ಮೂಲಕ ಎಲ್ಲರ ಮನಸ್ಸನ್ನು ಅರಳಿಸುವ ಮನೀಷಾ ಇದು ನಮ್ಮ ಕಾಲೇಜಿನ ಸವಿವರಗಳನ್ನು ತೆರೆದಿಡುವ ವಾರ್ಷಿಕ ಸಂಚಿಕೆ.

       ವಿದ್ಯಾರ್ಥಿಗಳ ಪ್ರತಿಭೆಗೆ ಕೈಗನ್ನಡಿಯಂತೆ ಇರುವ ಮನೀಷಾ ನಾಡಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾದುದು. ಇಲ್ಲಿ ಪ್ರಾಧ್ಯಾಪಕರ ಶ್ರಮ ,ವಿದ್ಯಾರ್ಥಿಗಳ ಪರಿಶ್ರಮ ಗಮನಿಸಬೇಕಾದ ಅಂಶ. ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕಾಲೇಜುಗಳು ಇದ್ದು ಇವುಗಳೆಲ್ಲವೂ ಕೂಡ ತಮ್ಮ ವಾರ್ಷಿಕ ಸಂಚಿಕೆಯನ್ನು ಸ್ಪರ್ಧೆಗಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತವೆ. ಆದರೂ ಕೂಡ ಹೆಚ್ಚಿನ ಭಾರಿ ಪ್ರಥಮ ಬಹುಮಾನವನ್ನು ಬಾಚಿರುವುದು ಮನೀಷಾ ಎಂಬುದು ನಮ್ಮೆಲ್ಲರ ಹೆಮ್ಮೆ.

   ಮನೀಷಾ ಎಂಬುದು ಬೌದ್ಧಿಕ ಚಟುವಟಿಕೆ .ಇದರಲ್ಲಿ ವಿದ್ಯಾರ್ಥಿಗಳ    ಸಾಂಸ್ಕೃತಿಕ ,ಸಾಹಿತ್ಯಿಕ, ಕ್ರೀಡಾ ಹಾಗೂ ಶೈಕ್ಷಣಿಕ ಸಾಧನಾ ವಿವರಗಳನ್ನು ಅಲ್ಲದೆ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಯಾವೆಲ್ಲ ಸೌಲಭ್ಯಗಳನ್ನು ಒದಗಿಸಿವೆ ಎಂಬ ಮಾಹಿತಿಯನ್ನು ತೆರೆದಿಡುತ್ತದೆ. ಇದರ ವಿಶೇಷತೆ ಏನೆಂದರೆ ಪ್ರಮುಖ ಭಾಷೆಗಳಾದ ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ ಸೇರಿದಂತೆ ಸುಮಾರು ೩೪ ಭಾಷೆಗಳ ಬರಹಗಳು ಈ ಸಂಚಿಕೆಯಲ್ಲಿ ಅಡಕಗೊಂಡಿದೆ. ಸುಮಾರು ೧೦ ವರ್ಷಗಳ ಕಾಲ ಇದರ ನೇತೃತ್ವ ವಹಿಸಿಕೊಂಡು ಅತ್ಯುತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಿ.ನಾಗರಾಜಪ್ಪ ಇವರನ್ನು ಇದರ ಕುರಿತು ವಿಚಾರಿಸಿದಾಗ ತಮ್ಮ ಹಲವಾರು ಅನುಭವಗಳನ್ನು ತೆರೆದಿಟ್ಟರು. ಹೆಚ್ಚಿನ ಸಂಶೋಧನಾ ಲೇಖನಗಳು ಮನೀಷಾಕ್ಕೆ ಬಂದು ಇನ್ನು ಹೆಚ್ಚು ಪ್ರಸಿದ್ಧಿ ಪಡೆಯಲಿ ಎಂದು , ಹಲವು ಭಾರಿ ಪ್ರಥಮ ಬಹುಮಾನ ಬಂದದಕ್ಕೆ ಸಂತಸ ವ್ಯಕ್ತಪಡಿಸಿದರು.

     ಒಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾರಿಯಾಗಿರುವ ಮನೀಷಾ ಎಲ್ಲರ ಮನಸ್ಸು ಗೆದ್ದು ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ
.
ರಾಹುಲ್ ಎಸ್ ಎಂ
ದ್ವಿತೀಯ ಪತ್ರಿಕೋದ್ಯಮ
ದೂರವಾಣಿ: 9900780203

Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

wow! yummy

          ವಾ.... ಇಡ್ಲಿ  ವಡೆ ಸಾಂಬಾರ್ ಇಡ್ಲಿ-ವಡೆ ಸಾಂಬರ್ ಆಹಾ ನೆನೆಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ......ಅಬ್ಬಾ ಎಂತಹ ಕಾಂಬಿನೇಷನ್ ಅಲ್ವಾ , ಇಡ್ಲಿ ಮತ್ತೆ ವಡೆಯದ್ದು. ಯಾವುದೇ ಸಮಾರಂಭ ಆದರೂ ಮೊದಲಿಗೆ ನೆನಪಾಗುವುದು ಇಡ್ಲಿ ವಡೆ. ಯಾವ ಫಾಸ್ಟ್-ಫುಡ್ ತಿಂಡಿಯ ಮುಂದೆ ಇಡ್ಲಿಗೆ ಸರಿಸಾಟಿ ಯಾವುದೂ ಇಲ್ಲ. ಅಬ್ಬಾ ಅದರ ರುಚಿ ನೆನೆಸಿಕೊಂಡರೆ ನಾಲಿಗೆ ನೀರೂರುತ್ತದೆ.   ಇಡ್ಲಿಯನ್ನು , ವಡೆಯನ್ನು ಸೇರಿಸಿ ಅದಕ್ಕೆ ಸಾಂಬಾರ್ ಹಾಕಿ ಮಿಕ್ಸ್ ಮಾಡಿ ತಿಂದ್ರಂತೂ , ಆಹಾ  ಯಾವ ಅಮೃತಕ್ಕೂ ಕಡಿಮೆ ಇಲ್ಲಾ. ಈಗಲೂ ಅದೆಷ್ಟೋ ಜನರಿದ್ದಾರೆ ಹೋಟೆಲಿಗೆ ಹೋಗಿಯೇ ಇಡ್ಲಿ-ವಡೆ ತಿನ್ನುವವರು. ನಾನು ಮನೆಗೆ ಹೋಗುವಾಗ ಮನೆ ಹತ್ತಿರದ ಹೋಟೆಲಿನ ಇಡ್ಲಿ-ವಡೆಯ ಪರಿಮಳವೂ ನೇರವಾಗಿ ನನ್ನನ್ನು ಹೋಟೆಲ್ ಬಳಿಗೆ ಕಳಿಸುವಂತೆ ಮಾಡುತ್ತದೆ.     ಕಿಲಾಡಿ-ಜೋಡಿ ಅವಾರ್ಡ ಏನಾದರೂ ಮಾಡಿದ್ರೆ ಅದು ಇಡ್ಲಿ-ವಡೆಗೆಯೇ ಸಿಗುತ್ತದೆ. ಯಾಕಂದ್ರೆ ನೀವು ಯಾವ ನೂಡಲ್ಸ್ , ಸಾಸ್ , ಪಿಝ್ಝ , ಬರ್ಗರ್ , ಬೇಕಾದ್ರು ತಿನ್ನಿ ಅದರಲ್ಲಿ ನಿಮಗೆ ಸಿಗುವ ತೃಪ್ತಿಗಿಂತ ಬರೀ ಇಡ್ಲಿ- ವಡೆಯ ಸ್ವಾದವೇ ಬೇರೆ. ಅಷ್ಟೇ ಅಲ್ಲ ಇಡ್ಲಿ-ವಡೆ ಬಂದಿರುವುದು ನಮ್ಮ ಪೂರ್ವಕಾಲದಿಂದ. ಮನೆಯಲ್ಲೇ ತಯಾರು-ಮಾಡಿ ತಿನ್ನಬಹುದಾದಂಥದ್ದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಷ್ಟು ರುಚಿಯೋ ಅಷ್...