ಸೇಡು
ಒಂದು ದಿನ ಬೆಳಿಗ್ಗೆ ಯಾವುದೇ ಕ್ಲಾಸ್ ಇಲ್ಲದೆ, ರೂಮ್‌ಗೆ ಹೋಗುವುದಕ್ಕೆ ಮನಸ್ಸು ಸಹ ಇಲ್ಲದೆ ಪೇಚಾಡಿ-ಪೇಚಾಡಿ ಲೈಬ್ರರಿಗೆ ಹೋಗುವುದೆಂದು ನಿರ್ಧರಿಸಿ ನಾನು ನನ್ನ ಫ್ರೆಂಡ ಲೈಬ್ರರಿಕಡೆ ಮುಖ ಮಾಡಿದೆವು. ಆಕ್ಷಣ ಕನ್ನಡದ ಒಂದು ಪದ್ಯದ ಮೇಲೆ ಬರೆಯುವುದಕ್ಕೆ ಹೇಳಿದ್ದ ಒಂದು ssಪ್ರಬಂಧದ ನೆನಪಾಯಿತು. ಸರಿಹಾಗಾದರೆ ಅದನ್ನೆ ಬರಿಯೋಣ ಎಂದು ಕನ್ನಡ ಬುಕ್ ಜೊತೆಗೆ ನಾಲಕ್ಕು ಬಿಳಿ ಹಾಳೆಗಳನ್ನು ತೆಗೆದುಕೊಂಡು ಲೈಬ್ರರಿಯ ಒಳಗೆ ಎಂಟ್ರಿ ಆದೆ.
ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಸೆಮಿಸ್ಟರ್‌ಗೆ ೪೦ ತಾಸು ಲೈಬ್ರರಿ ಬಳಸಬೇಕೆಂಬ ಕಡ್ಡಾಯ ನೀತಿ ಇತ್ತು. ಇದೇ ಕಾರಣ ಯಾರು ಯಾರು ಎಷ್ಟು ಲೈಬ್ರರಿ ಹವರ್ ಮಾಡಿದ್ದಾರೆಂದು ಲೆಕ್ಕ ಹಿಡಿಯುವುದಕ್ಕೆ ನಮ್ಮ ಐಡಿ ಕಾರ್ಡ್‌ಗಳಲ್ಲಿ ಬಾರ್‌ಕೋಡ್ ಅಳವಡಿಸಿದ್ದರು. ಇದನ್ನು ಸ್ಕಾನ್ ಮಾಡುವುದಕ್ಕೆ ಲೈಬ್ರರಿ ದ್ವಾರದಲ್ಲಿ ಬಾರ್‌ಕೋಡ್ ಸ್ಕಾನರ್ ಇತ್ತು. ಇಲ್ಲಿ ಸ್ಕಾನ್ ಮಾಡಿ ನಾವು ಒಳಗೆ ಒಯ್ಯುತಿರುವ ವಸ್ತುವನ್ನು ಪರಿಶೀಲಿಸಿ ಅಪ್ಪಣೆ ಕೊಡುತಿದ್ದರು. ನನಗೆ ಇಲ್ಲಿ ಒದಗಿ ಬಂದ ಬಿಕ್ಕಟ್ಟೆಂದರೆ ಪ್ರಿಂಟೆಡ್ ಬುಕ್ ಒಳಗೆ ತೆಗೆದುಕೊಂಡು ಹೋಗಲು ಸ್ಕಾನರ್ ಬಳಿ ಕುಳಿತಿದ್ದ ರಮೇಶ್ ಸರ್ ಬಿಡಲೇ ಇಲ್ಲ. ಒಳಗಡೆ ಈ ಬುಕ್‌ನ ಬೇರೆ ಪ್ರಿಂಟ್ ಇರಲಿಲ್ಲ. ಹಾಗಾಗಿ ನನಗೆ ಆ ಬುಕ್ ಒಳಗೆ ತೆಗೆದುಕೊಂಡು ಹೋಗದೆ ಬೇರೆವಿಧಿಯೇ ಇರಲಿಲ್ಲ. ಹೇಗಾದರು ಮಾಡಿ ಒಳಗೆ ತೆಗೆದುಕೊಂಡು ಹೋಗಲೇಬೇಕಾಗಿತ್ತು. ರಮೇಶ್ ಸರ್ ಅನ್ನು ಒಂದೆರಡು ಬಾರಿ ಬೇಡಿಕೊಂಡೆ ಏನೆಂದರು ಜಗ್ಗಲಿಲ್ಲ. ಸರಿ ಏನು ಮಾಡುವಂತಿಲ್ಲವೆಂದು ಅನ್ನಿಸಿದಾಗ ಬ್ಯಾಗ್ ಬಳಿ ಬಂದು ಪುಸ್ತಕ ಒಳ ಸೇರಿಸುತ್ತ ಆ ಕಡೆ ನೋಡಿದೆ......ಅರೆ.....ಆಗ.......ಆಗದ್ದು ಈಗ ಹೇಗೆ ಸಾಧ್ಯವಯಿತು......ನನಗೆ ಆಗ ಆ ಪುಸ್ತಕವನ್ನು ಒಳಗೆ ತೆಗೆದುಕೊಂಡು ಹೋಗಲು ಬಿಡದವ ಈಗ ಹೇಗೆ ಆ ಹುಡುಗರಿಗೆಲ್ಲಾ ಬಿಡುತ್ತಿದ್ದಾನೆ. ಒಮ್ಮೆ ತಲೆ ತುರಿಸಿಕೊಂಡೆ. ಹಾಂ....... ನೆನಪಿಗೆ ಬಂತು, ಅದೊಂದು ದಿನ ನನ್ನ ಕ್ಯಾಮೆರಾ ತೆಗೆದುಕೊಂಡು ಲೈಬ್ರರಿ ಒಳಗೆ ಹೋಗಿ ಅಲ್ಲಿ ಕುಳಿತಿದ್ದ ಒಬ್ಬರ ಕೈಯಲ್ಲಿ ಕೊಟ್ಟು ಆಮೇಲೆ ಬಂದು ತೆಗೆದುಕೊಳ್ಳುತ್ತೆನೆಂದು ಹೇಳಿ ಪುಸ್ತಕ ಓದಲು ಹೋದೆ. ರಾತ್ರಿ ಎಂಟು ಗಂಟೆ ಹೊರಬಂದವನು ಹುಡುಗರ ಜೊತೆ ಮಾತಾಡುತ್ತಾ ಕ್ಯಾಮೆರಾ ಹಿಂಪಡೆಯುವುದನ್ನೇ ಮರೆತುಬಿಟ್ಟಿದ್ದೆ. ಸರಿ ಮರುದಿನ ಹೋಗಿನೋಡುವಷ್ಟರಲ್ಲಿ. ನಾನು ಯಾರ ಬಳಿ ಕ್ಯಾಮೆರಾ ಕೊಟ್ಟಿದ್ದೆನೊ ಅವರ ಬದಲು ರಮೆಶ್‌ಸರ್ ಇದ್ದರು ನಾನು ಕೇಳುತ್ತಿದ್ದಂತೆ ಹಿಂದೆಮುಂದೆ ನೋಡದೆ ಕೊಟ್ಟುಬಿಟ್ಟರು. ಇದೇ ಕಾರಣಕ್ಕೆ ಮರುದಿನ ಪಾಪ ಅವರಿಗೆ ಮಂಗಳಾರತಿ ನಡೆದಿತ್ತು........
ಇದೇ ಸೇಡನ್ನು ನನ್ನ ಮೇಲೆ ತೀರಿಸಿಕೊಳ್ಳಲು ಈ ರೀತಿ ಪುಸ್ತಕ ಒಳಬಿಡದೆ ಆಡಿಸುತ್ತಿದ್ದರು. ಎಷ್ಟಾಯಿತಲ್ಲ ಈಗ ಸೇಡಿಗಾದರೂ ಒಳಗೆ ಪುಸ್ತಕ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಿ ಒಂದು ದೊಡ್ಡ ಡೈರಿಯ ಒಳಗೆ ನಿಧಾನವಾಗಿ ಇದನ್ನು ಇಳಿಸಿ ಒಳಹೊಕ್ಕೆ.
ನನ್ನ ಬಾರ್‍ಕೋಡ್ ಸ್ಕ್ಯಾನ್ ಆಯಿತು ಹೋಗಿ ಕುರ್ಚಿಯ ಮೇಲೆ ಕುಳಿತೆ. ಇನ್ನೂ ಕೂಡ ಸ್ಕ್ಯಾನರ್ ಇದ್ದ ಕಡೆಯಿಂದ ಇನ್, ಔಟ್, ಇನ್, ಔಟ್, ಔಟ್, ಇನ್ ಎಂಬ ಶಬ್ದ ಬರುತ್ತಲೇ ಇತ್ತು. ಅಲ್ಲಿನ ಒಂದು ’ಇನ್’ ಜೊತೆ ಒಳಬಂದ ಗೆಳೆಯ ಮಗ ಕನ್ನಡ ಸರ್ ಬಂದಿಲ್ಲ ಕಣೊ ಪಿಪಿಟಿ ನಾಡಿದ್ದಿಗೆ ಪೋಸ್ಟಪೋನ್ ಆಗಿದೆ ಎಂದ. ಒಂದು ಕಡೆ ಆನಂದವಾದರೆ, ಸೇಡಿಗೋಸ್ಕರ ಪುಸ್ತಕ ಒಳಗೆ ತಂದಿದ್ದು ವ್ಯರ್ಥವಾಯಿತಲ್ಲ ಎಂದು ಬೇಸರವಾದರೆ, ಈಗ ಹೊರಗೆ ಹೇಗೆ ತಗೊಂಡು ಹೋಗೋದು ಎಂಬ ???? ಹುಟ್ಟಿತು.

SAMPADA S BHAGAVATH
SECOND YEAR JOURNALISM
CONTACT NO:7760396839
Comments
Post a Comment