Skip to main content

Bonsai- a small feature.




ಕುಬ್ಜ ಸಸ್ಯ ಬೊನ್ಸಾಯ್

Bonsai tree.

ಬೋನ್ಸಾಯ್ ಎಂದೊಡನೆ ಎಲ್ಲರೂ ಕುತೂಹಲದಿಂದ ಕಣ್ಣರಳಿಸುತ್ತಾರೆ. ಸಾಮಾನ್ಯವಾಗಿ ಅಲಂಕಾರಕ್ಕಾಗಿ ಬಳಸುವ ಜೊತೆಗೆ ಎಲ್ಲರನ್ನೂ ತನ್ನತ್ತ ಸೆಳೆಯುವ ಸಸ್ಯ ಬೋನ್ಸಾಯ್. ಇದೊಂದು ಕುಬ್ಜ ಸಸ್ಯ ಪ್ರಕಾರ ಎಂದು ಹೆಸರಾಗಿದೆ. ಧಾರಕಗಳಲ್ಲಿ ಬೆಳೆಯುವ ಮರಗಳನ್ನು ಬಳಸಿಕೊಂಡ ಜಪಾನಿನ ಕಲಾ ಪ್ರಕಾರವಾಗಿದೆ. ಇದೇ ಆಚರಣೆಗಳು ಚೀನೀ ಸಂಪ್ರದಾಯದಲ್ಲಿ ಸೇರಿದಂತೆ ಇತರೆಡೆಯೂ ಅಸ್ತಿತ್ವದಲ್ಲಿದೆ. ಜಪಾನೀಸ್ ಸಂಪ್ರದಾಯದಂತೆ ಬೆಳೆಸುವ ಬೋನ್ಸಾಯ್ ನೂರು ವರ್ಷಗಳಿಗಿಂತಲೂ ಹಳೆಯ ಪರಂಪರೆಯನ್ನು ಹೊಂದಿದೆ. ಇದರ ಚೀನೀ ಪದ ಪೆನ್ಜಯ್. ಇಂಗ್ಲಿಷ್‌ನಲ್ಲಿ ಇದನ್ನು ಬೋನ್ಸಾಯ್ ಎನ್ನುತ್ತಾರೆ. ಇದರ ಅರ್ಥ ಕುಂಡಗಳಲ್ಲಿ ಚಿಕಣಿ ಮರಗಳು ಎಂದು.
ಬೋನ್ಸಾಯ್ ಸುಮಾರು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ ಹುಟ್ಟಿತೆಂದು ನಂಬಲಾಗಿದೆ. ಹಾನ್ ರಾಜವಂಶದವರು ಮರದ ಟ್ರೆಗಳು ಅಥವಾ ಸುಟ್ಟ ಜೇಡಿಮಣ್ಣಿನ ಮಡಕೆಗಳಲ್ಲಿ ಈ ರೀತಿಯ ಕೃಷಿ ಮಾಡುವ ಅಭ್ಯಾಸ ಹೊಂದಿದ್ದರು. ಅವರು ಇದಕ್ಕೆ ಪೆಂಜಾಯ್ ಎಂದು ಕರೆಯುತ್ತಿದ್ದರು. ಇತರ ಸಸ್ಯಗಳಂತೆ ಬೋನ್ಸಾಯ್ ಆಹಾರ ಉತ್ಪಾದನೆ ಅಥವಾ ಔಷಧಿ ಉದ್ದೇಶ ಹೊಂದಿಲ್ಲ. ಬದಲಿಗೆ ಇದು ಧೀರ್ಘಕಾಲದ ಕೃಷಿ ಚಟುವಟಿಕೆಯ ಭಾಗವಾಗಿದೆ.
ಬೋನ್ಸಾಯ್ ಬೆಳೆಸುವುದು ಚಿಕ್ಕ ಕುಂಡಗಳಲ್ಲಿ. ನಿಮ್ಮ ಪರಿಸರಕ್ಕೆ ಸರಿಯಾಗಿ ತಳಿಗಳ ಆಯ್ಕೆ ಜೊತೆಗೆ ಮೂಲಭೂತ ಮಾರ್ಗಸೂಚಿಗಳವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಬೋನ್ಸಾಯ್ ಮರಗಳನ್ನು ಬೀಜಹಾಕಿ ಅಥವಾ ಸಿದ್ಧಮರಗಳನ್ನು ತಂದು ಬೆಳೆಸಬಹುದು. ಆಗಾಗ ಬೊನ್ಸಾಯ್ ಮರದ ಬೇರುಗಳನ್ನು ಕೊಂಬೆಗಳನ್ನು ಕತ್ತರಿಸುತ್ತಿರಬೇಕು. ಹೆಚ್ಚು ಬಿಸಿಲು ಬೀಳದಂತಹ ಜಾಗದಲ್ಲಿ ಇಡಬೇಕು. ಮಣ್ಣು ಪಲವತ್ತಾಗಿರುವಂತೆಯೂ ಜೊತೆಗೆ ನಿಯಮಿತ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಆಗ ಮರ ಹಲುಸಾಗಿ ಬೆಳೆಯುತ್ತದೆ.
ಬೋನ್ಸಾಯ್ ಮರಗಳು ೨ ಇಂಚು ಅಥವಾ ೫ ರಿಂದ ೧೦ ಸೆಂ.ಮೀ ಎತ್ತರಕ್ಕೆ ಬೆಳೆಯುತ್ತದೆ. ಆದರೆ ಮರ ಬಲಿಯಲು ೩ ರಿಂದ ೫ ವರ್ಷ ತೆಗೆದುಕೊಳ್ಳುತ್ತದೆ. ಬೋನ್ಸಾಯ್ ಪಾತ್ರೆಗಳಲ್ಲಿ ನೀರು ಅಂಶವಿದೆಯೆ ಎಂದು ಖಚಿತಪಡಿಸಿಕೊಳ್ಳುತ್ತಿರಬೇಕು. ನೀರಿನ ಅಂಶದಿಂದ ಮಣ್ಣು ಹೆಚ್ಚು ಕೊಚ್ಚೆಯಾದರೆ ಗಿಡ ಕೊಳೆತು ಸಾಯುತ್ತದೆ. ಹೆಚ್ಚು ಬಿಸಿಲಿದ್ದರೂ ಅಥವಾ ಬೇರು ಕತ್ತರಿಸುವುದು ವ್ಯತ್ಯಾಸವಾದರೂ ಗಿಡ ಬದುಕುವುದು ಕಷ್ಟ. ಬೋನ್ಸಾಯ್ ಅಂಗಡಿಗಳಿಂದ ಸಿದ್ದ ಬೋನ್ಸಾಯ್ ತಂದು ಸಾಕಬಹುದು. ನಂತರ ಮರದ ಎರಡೂ ಕೊಂಬೆಗಳು ಒಂದೇ ಎತ್ತರದಲ್ಲಿದ್ದರೆ ಅದನ್ನು ಕತ್ತರಿಸಿ ಅಸ್ವಾಭಾವಿಕ ಶಾಖೆಗಳನ್ನು ತೆಗೆದುಹಾಕಿ. ಆಗ ಮರ ಆಕರ್ಷಕವಾಗಿ ಕಾಣುತ್ತದೆ. ಆಗಾಗ ರೀಪಾಟಿಂಗ್ ಮಾಡುವುದು ಇದಕ್ಕೆ ಅತ್ಯವಶ್ಯಕ.
ಹಲವಾರು ಶೈಲಿಗಳಲ್ಲಿ ಬೋನ್ಸಾಯ್ ಮರಗಳನ್ನು ಬೆಳೆಸಬಹುದು. ಉದಾಹರಣೆಗೆ ನೇರ, ಸ್ಲಾಂಟ್, ಕ್ಯಾಸ್ಕೆಡ್, ರಾಫ್ಟ, ರೂಟ್, ಅತಿ ರಾಕ್, ಬ್ರೂಮ್ ಹೀಗೆ. ಬೋನ್ಸಾಯ್ ಮರಗಳಲ್ಲಿ ಹಲವಾರು ವಿಧಗಳಿವೆ. ಇವುಗಳನ್ನು ಗಾತ್ರದ ಆಧಾರದ ಮೇಲೆ ವಿಂಗಡಿಸಬಹುದು. ಸಣ್ಣ ಗಾತ್ರದ ಮರಗಳಾದ ಮಮೆ, ಶೋಹಿನ್ , ಕಿಫು, ಚಿಹಿನ್ ಮಧ್ಯಮ ಗಾತ್ರದ ಮರಗಳಾದರೆ ಡೈಝ ಎಂಬುದು ದೊಡ್ಡಗಾತ್ರದ ಬೋನ್ಸಾಯ್‌ಗೆ ಉದಾಹರಣೆ ಎಂದು ಹೇಳಬಹುದು.

ನಮಿತಾ ಜೋಯ್ಸ್
ದ್ವಿತೀಯ ಪತ್ರಿಕೋದ್ಯಮ


Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

BOQUE PREPARATION- EASY STEPS

ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ?  ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?!  ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ  ಸಂದರ್ಭಗಳಲ್ಲಿ  ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?  ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...