ಹೂವಿನ ಮೇಲೆ ಸ್ತ್ರೀಯರ ಒಲವ್!
ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ? ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?! ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?ಹೂಗುಚ್ಛ ತಯಾರಿ ಹೇಗೆ?
ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು.ಹೂಗುಚ್ಛದ ಆರೈಕೆ ಹೇಗೆ?
ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ.- ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು.
- ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು.
- ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು.
- ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ಕಾಲದ ಬಾಳ್ವಿಕೆ ಬರುತ್ತದೆ.
- ಮೇಲಿನ ವಿಧಾನಗಳನ್ನು ಸರಿಯಾಗಿ ಪಾಲಿಸಿದರೆ, ಹೂಗುಚ್ಛವು ೭-೧೦ ದಿನಗಳ ಕಾಲ ಬಾಳುತ್ತದೆ.
ಕುಳಿತಲ್ಲೇ ಹಣ ಸಂಪಾದಿಸಬಹುದು
ಸೌಂದರ್ಯಪ್ರಜ್ಞೆ ಇರುವ ಮಹಿಳಾಮಣಿಗಳು ವಿವಿಧ ವಿನ್ಯಾಸಗಳ ಹೂಗುಚ್ಛವನ್ನು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ತಯಾರಿಸಿ ಅದನ್ನು ಒಳ್ಳೆಯ ಬೆಲೆಗೆ ಮಾರಿ, ಆದಾಯಗಳಿಸಬಹುದು. ದಿನವಿಡೀ ಟಿವಿ ನೋಡಿ ಕಾಲಹರಣ ಮಾಡುವ ಗೃಹಿಣಿಯರು ಹೂಗುಚ್ಛ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ವಿದ್ಯಾರ್ಥಿನಿಯರು ವಿದ್ಯಾಬ್ಯಾಸದೊಂದಿಗೆ ಇವುಗಳಲ್ಲಿ ತೊಡಗಿದರೆ ಪಾಕೆಟ್ ಮನಿಗಾಗಿ ಹಣವೊಡ್ಡುವ ಪರಿಸ್ಥಿತಿ ದೂರವಾಗುತ್ತದೆ! ಮುಂದೆ ಮನೆಯಲ್ಲಿ ಹಣದ ಸಮಸ್ಯೆ ಎದುರಾದಾಗ ಕೂಡಿಟ್ಟ ಹಣ ಉಪಯೋಗಕ್ಕೆ ಬರುತ್ತದೆ.
ನಾವೂ ಸಂಪಾದಿಸುತ್ತೇವೆ
ಸ್ನೇಹಿತೆಯರ ತಂಡವನ್ನು ಕಟ್ಟಿಕೊಂಡು ಶೀಘ್ರದಲ್ಲೇ ಈ ವ್ಯವಹಾರವನ್ನು ಪ್ರಾರಭಿಸುತ್ತೇವೆ ಎನ್ನುತ್ತಾಳೆ ನನ್ನ ಗೆಳತಿ ಕೀರ್ತಿ.ದುಬಾರಿ ಖರ್ಚಿಗೆ ಬ್ರೇಕ್!
ಸಭೆ, ಸಮಾರಂಭ, ಗೃಹಪ್ರವೇಶೋತ್ಸವ, ಔತಣಕೂಟ, ಮದುವೆ ಕಾರ್ಯಕ್ರಮಗಳಿಗೆ ದುಬಾರಿ ಖರ್ಚಿನಲ್ಲಿ ಹೂಗುಚ್ಛಗಳನ್ನು ಖರೀದಿಸುವ ಬದಲು, ಒಂದಷ್ಟು ಜನ ಸೇರಿಕೊಂಡು ತಯಾರಿಸಿದರೆ, ಖರ್ಚಿಗೆ ಬ್ರೇಕ್ ಬೀಳುತ್ತದೆ!ಚಿತ್ರ-ಬರಹ-
PRAJNA HEBBAR
SECOND YEAR JOURNALISM
CONTACT NO: 9008897064
x
x
Comments
Post a Comment