Skip to main content

ಓದಿದ್ದ ಒಂದು ಕಾದಂಬರಿಯ ಸಾಲು

ಓದಿದ್ದ ಒಂದು ಕಾದಂಬರಿಯ ಸಾಲು
ನೀರವ ಮೌನ, ಸದಾ ಬಸ್ಸಿನಲ್ಲಿ ಬರುವಾಗ ತಂಪಾದ ಗಾಳಿ ನನ್ನ ಮುಂಗುರುಳನ್ನು ಒಮ್ಮೆ ಸೋಕಿ ಹೋಗುವಾಗ ತುಟಿಯ ಅಂಚಿನಲ್ಲಿ ಚಿಕ್ಕ ನಗು ಮೂಡುತ್ತಿದ್ದ ನನ್ನ ಮುಖದಲ್ಲಿ ಅಂದು ಆ ನಗು ಮಾಯವಾಗಿತ್ತು. ಗಾಳಿ ಬಂದು ಮುಂಗುರುಳನ್ನು ತಾಕಿದಾಗ ಕಿರಿಕಿರಿಯ ಅನುಭವ. ಪಕ್ಕದಲ್ಲಿ ಕುಳಿತ್ತಿದ್ದ ಗೆಳತಿಗೆ 'ಸದಾ ಪಟ ಪಟ ಮಾತಾಡುವ ಇವಳು ಇಂದು ಮೌನ ಮೂರ್ತಿಯಾಗಿದ್ದಾಳಲ್ಲ, ಏಕೆ?' ಎಂಬ ಪ್ರಶ್ನೆ ಮೂಡಿತ್ತೋ ಏನೋ?!!. ತುಂಬ ದಿನಗಳ ನಂತರ ಮನೆಗೆ ಹೋಗುತ್ತಿದ್ದ ನನಗೆ ಅಂದು ಮೊದಲು ಇರುತ್ತಿದ್ದ ಖುಷಿ ಇರಲ್ಲಿಲ್ಲ.

ಖುಷಿ ಪಡಬೇಕು, ಖುಷಿಯಾಗಿ ಮನೆಗೆ ಹೋಗಬೇಕು ಎಂದು ಎಷ್ಟು ಪ್ರಯತ್ನಿಸಿದರೂ, ಮುಖದಲ್ಲಿ ನಗು ಮೂಡುವ ಮೊದಲೇ ಮನಸ್ಸು ಆ ನಗುವಿಗೆ ಬೇಸರ ಎಂಬ ಕಡಿವಾಣ ಹಾಕುತ್ತಿತ್ತು. ಬಸ್ ಸ್ಟಾಂಡ್ನಲ್ಲಿ ಬಸ್ ನಿಂತ ತಕ್ಷಣ ಎದುರಿಗೆ ಕಂಡ ಅಂಗಡಿಯ ಹೆಸರು ಸಾವಿತ್ರಿ ಎಂದಿತ್ತು. ಅದನ್ನು ನೋಡಿದ ಕೂಡಲೆ ಅಮ್ಮನ ನೆನಪಾಯಿತು. ಆಗಿಂದಾಗಲೇ ಬ್ಯಾಗ್  ಅನ್ನು ಕೆಳಗೆ ಇಳಿಸಿ ತೊಡೆಯ ಮೇಲೆ ಇಟ್ಟುಕೊಂಡು ಬಹಳ ದಿನದಿಂದ ಕೂಡಿಟ್ಟ ದುಡ್ಡಿನಲ್ಲಿ ಅಮ್ಮನಿಗೋಸ್ಕರ ಕೊಂಡುಕೊಂಡ ಸಿಲ್ಕ್ ಸೀರೆ ತೆಗೆದು ಒಮ್ಮೆ ಗಟ್ಟಿಯಾಗಿ ಅದನ್ನು ಅಪ್ಪಿಕೊಂಡೆ. ಆ ಕ್ಷಣ ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹರಿಯಲು ಶುರುವಾಯಿತು. ಅವತ್ತಿನವರೆಗೂ ಅಮ್ಮನಿಗೆ ಆ ಸೀರೆಯನ್ನು ನಾನೆ ಉಡಿಸಿ ಅವಳನ್ನು ಕಣ್ಣುತುಂಬ ನೋಡ್ಬೇಕು ಎಂದೆಲ್ಲಾ ತುಡಿದ ಮನಸ್ಸು ಅವತ್ತು ಅದನ್ನೆಲ್ಲಾ ಮರೆತು ಕಣ್ಣಲ್ಲಿ ನೀರು ಬರುವಂತೆ ಮಾಡಿತು. ಸೀರೆಯನ್ನು ಬ್ಯಾಗ್ ನಲ್ಲಿ ಹಾಕುವ ಹೊತ್ತಿಗೆ ಪಕ್ಕದಲ್ಲಿ ಕುಳಿತ್ತಿದ್ದ ಗೆಳತಿಗೆ ಅವಳ ಊರು ಬಂದ ಕಾರಣ ಬಸ್ಸಿನಿಂದ ಇಳಿಯುವ ಸಮಯ ಬಂದಿತ್ತು. ಅಲ್ಪ ಸಮಯ ಕಡಿಮೆ ಇದ್ದಿದ್ದರಿಂದ ಅವಳಿಗೆ ನನ್ನ ಕಣ್ಣೀರನ್ನು ಒರೆಸಲು ಸಾಧ್ಯವಾಗಲ್ಲಿಲ್ಲ. ಕೊನೆಗೂ ಅಳಬೇಡ ಎನ್ನುವ ಸಂದೇಶವನ್ನು ಕಣ್ಣಲ್ಲೇ ಹೇಳಿ, ವಿದಾಯ ಹೇಳಿದಳು. ಇದ್ದ ಒಬ್ಬಳೂ ದೂರವಾದ್ದರಿಂದ ನನ್ನಲ್ಲಿ ಒಂಟಿತನ ಆವರಿಸುತು. ನಾನು ಸಣ್ಣವಳಿದ್ದಾಗಲೇ ಅಪ್ಪ ತೀರಿದ್ದು, ತಮ್ಮ ಬಾವಿಗೆ ಬಿದ್ದು ಪ್ರಾಣ ಕಳೆದು ಕೊಂಢದ್ದು, ಅಮ್ಮ ಕೂಲಿ ಮಾಡಿ ನನ್ನನ್ನು ಸಾಕಿದ್ದು ಹೀಗೆ ಬಚ್ಚಿಟ್ಟುಕೊಂಡಿದ್ದ ಸಂಗತಿಗಳು ನೆನಪಾಗಿ ಮನಸ್ಸಿನ ಬೇಸರ ಇನ್ನೂ ಹೆಚ್ಚಾಗಿತ್ತು. ಒಂಟಿತನದಿಂದ ಹೊರ ಬರಲೆಂದು ಮೊಬೈಲನ್ನು ಕೈಗೆತ್ತಿಕೊಂಡೆ, ಅಮ್ಮನಿಗೆ ಒಂದು ಫೋನ್ ಮಾಡುವ ಅನ್ನಿಸಿ ಫೋನ್ ಮಾಡಿದೆ. ಅತ್ತಲಿಂದ ಅಮ್ಮ ' ಮಗಳೇ, ಎಲ್ಲಿದ್ದೀಯಾ? ಅಂತು ಐದು ವರ್ಷಗಳ ನಂತರ ನಿನ್ನ ನೋಡ್ತೀನಿ. ಇನ್ನು ಎಷ್ಟು ಹೊತ್ತು ಆಗುತ್ತೆ ಮನೆಗೆ ಬರೋಕೆ? ಇಲ್ಲಿ ಊರಿನವರೆಲ್ಲಾ ನಿಮ್ಮ ಮಗಳು ಡಾಕ್ಟ್ರರಂತೆ, ಇಲ್ಲೇ ಆಸ್ಪತ್ರೆ  ತೆರಿತಾಳಂತೆ, ಅಂಥಾ ಮಗಳನ್ನ ಪಡಿಯೋಕೆ ನೀವು ಪುಣ್ಯ ಮಾಡಿದೀರಿ ಸಾವಿತ್ರಮ್ಮ ಅಂತ  ಹೇಳ್ತಾ ಇದ್ದಾರೆ. ಬೇಗ ಬಾ ಕಂದ. ನಿನ್ನ ನೋಡ್ಬೇಕು, ಮುದ್ದು ಮಾಡ್ಬೇಕು ಅನ್ನಿಸ್ತಿದೆ. ನಿನ್ನ ನೋಡಿದ ಮರುಕ್ಷಣನೇ ಈ ಮುದುಕಿಗೆ ಸಾವು ಬಂದ್ರು ಚಿಂತೆ ಇಲ್ಲ. ಆ ದೇವರು ನಿನ್ನ ರೂಪದಲ್ಲಿ ನನ್ನ ಜೀವನದಲ್ಲಿ ಬಂದಿದಾನೆ ಕಂದ' ಎನ್ನುತ್ತಿರುವಾಗಲೇ ನಾನು ' ಆಯ್ತು, ಅಮ್ಮ ಇನ್ನು ಒಂದೂವರೆ ಗಂಟೆಯಲ್ಲೆ ಮನೆಗೆ ಬಂದು ಬಿಡ್ತೀನಿ. ಹುಷಾರು ಈಗ ಫೋನ್ ಇಡ್ತೀನಿ' ಎಂದೆ. ಫೋನ್ ಇಟ್ಟವಳಿಗೆ ಅಮ್ಮನ ಮಾತುಗಳು ಏನೋ ಕೆಡುಕನ್ನು ಬಿಂಬಿಸುವಂತೆ ಅನ್ನಿಸಿತು. ಹೀಗೆ ಯೋಚನೆ ಮಾಡುತ್ತಿರುವಾಗ ಪಿಯುಸಿಯಲ್ಲಿ ಇದ್ದಾಗ ಓದಿದ್ದ ಒಂದು ಕಾದಂಬರಿಯ ಸಾಲು ನೆನಪಾಯಿತುಆಪ್ತ ಜೀವಗಳು ನಮ್ಮನ್ನು ಅಗಲುವಾಗ ನಮ್ಮ ಮನಸ್ಸು ಚಿತ್ರಹಿಂಸೆಯನ್ನು ಅನುಭವಿಸುತ್ತದೆ. ಸಾವಿನ ಮನೆಯ ವಿಕಾರ ಮೌನ, ಆಪ್ತರು ಅಗಲುವ ಮುಂಚೆಯೇ ನಮಗೆ ಗೋಚರಿಸುತ್ತದೆಕಣ್ಣರಿಯದಿದ್ದರೂ ಕರುಳರಿಯದೇ?” ಆದರೆ ಅದು ಸಾವಿನ ಸೂಚನೆ ಎಂಬುದನ್ನು ಅರಿಯಲಾರದೆ ನಾವು ಒದ್ದಾಡುತ್ತೇವೆ” . ನನ್ನ ಆ ಸಂಕಟವೂ ಆಪ್ತರ ಸಾವಿನ ಸೂಚನೆಯೇ? ಎಂದು ಒಮ್ಮೆ ಆಲೋಚಿಸುವಾಗ, ಇದೆಲ್ಲಾ ಪುಸ್ತಕದ ಬದನೆಕಾಯಿ ಎಂದು ಮನಸ್ಸಿನ ಯೋಚನೆಯನ್ನು ತಿರುಗಿಸಿ ಬಿಟ್ಟೆ. ನನ್ನ ಪ್ರಯಾಣಕ್ಕೆ ವಿದಾಯ ಹೇಳುವ ಸಮಯ ಬಂತು, ಬಸ್ಸಿನಿಂದ ಇಳಿದು ಮನೆಯ ದಾರಿಯತ್ತ ಸಾಗಿದೆ. ಮನೆಯ ಬಾಗಿಲು ತಲುಪುತ್ತಿದಂತೆ ಚಿಕ್ಕಮ್ಮ ಅಳುತ್ತಾ ಅಮ್ಮನ ಸಾವಿನ ಸುದ್ದಿ ತಿಳಿಸಿದಳು, ಫೋನ್ ನಲ್ಲಿ ಮಾತಾಡಿ  ಬರುವಾಗ ಅಮ್ಮ ಮಹಡಿಯ ಮೆಟ್ಟಿಲಿಂದ ಜಾರಿ ಬಿದ್ದು ತಲೆಗೆ ತುಂಬ ಪೆಟ್ಟಾಗಿ ತೀರಿ ಹೋದಳು ಎಂದು. 'ಅಮ್ಮಾ…' ಎಂದು ಕಿರಿಚಿಕೊಂಡವಳೇ ಕಣ್ಣು ತೆರೆದೆ. ಸೂರ್ಯನ ತಿಳಿಯಾದ ಕಿರಣ ಮುಖವನ್ನು ಸ್ಪರ್ಶಿಸುತ್ತಿತ್ತು. ಬೆಚ್ಚಗಿನ ಚಾದರ ಮೈಯನ್ನು ಆವರಿಸಿತ್ತು, ಕಣ್ಣುಗಳು ಒದ್ದೆಯಾಗಿದ್ದವು, ಮೈ ಬೆವರಿತ್ತು ಎದ್ದು ಕೂತವಳೇ ತಕ್ಷಣ ಹಾಸಿಗೆಯಿಂದ ಎದ್ದು ಅಡುಗೆ ಮನೆಯ ಕಡೆ ಓಡಿದೆ. ಅಮ್ಮ ರೇಡಿಯೋ ನಿನಾದವನ್ನು ಕೇಳುತ್ತಾ ಬಿಸಿ ಬಿಸಿ ತಿಂಡಿ ತಯಾರಿಸುತ್ತಿದ್ದಳು. ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಅಮ್ಮನನ್ನು ಬಾಚಿ ತಬ್ಬಿಕೊಂಡೆ. ಅಂದು ನನಗೆ ಅನ್ನಿಸಿತು ಮತ್ತೊಮ್ಮೆ ಆ ನೀರವ ಮೌನ ಇನ್ನೊಂದೂ ಕನಸಲೂ, ನನಸಲೂ ಆವರಿಸದಿರಲೀ ನನ್ನನ್ನು ಎಂದೂ…       
                                                                             -ಪದ್ಮರೇಖಾ ಭಟ್


Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

Gems -write up

ಕಾಡುವ GEMSನ ನೆನಪು ಜೆಮ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದಲ್ಲಿ ನನಗಿಷ್ಟವಾಗಿದ್ದ ಚಾಕಲೇಟ್ ಅಂದರೆ ಅದು ಜೆಮ್ಸ್. ಅಮ್ಮ, ಅಪ್ಪ ಪೇಟೆಗೆ ಹೋಗುತ್ತಿದ್ದಾಗ, ನೆಂಟರಿಷ್ಟರು ಮನೆಗೆ ಬರುತ್ತಿದ್ದಾಗ ತಪ್ಪದೇ ಎರಡು ಪಾಕೆಟ್ ಜೆಮ್ಸ್ ತರುತ್ತಿದ್ದರು. ದುಂಡಗಿದ್ದ ಅದನ್ನು ನಾವು “ಚಾಕಿ ಮಾತ್ರೆ” ಎಂದು ಕರೆಯುತ್ತಿದ್ದೆವು. ಬೇಸಿಗೆ ರಜೆಯಲ್ಲಿ ಸೋದರ ಸಂಬಂಧಿಗಳು ಬಂದಾಗ ಸೋದರ ಸೋದರಿಯರಿಗೆ ಸಮವಾಗಿ ಹಂಚುವ ಜವಾಬ್ದಾರಿ ಹಿರಿಯವಳಾದ ನನ್ನದಾಗಿತ್ತು. ನಾವು ಐದಾರು ಜನ 2 ಪಾಕೆಟನ್ನು ಹಂಚಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೆವು. ಬಣ್ಣದ ಅನುಗುಣವಾಗಿ ಸಮಪಾಲು ಮಾಡುತ್ತಿದ್ದೆವು. ಗಣಿತ ಮೇಷ್ಟ್ರು ಬಹುಶಃ ನನಗೆ ಬೇಸಿಕ್ ಗಣಿತ ಹೇಳಿಕೊಟ್ಟ ಕೀರ್ತಿ ಜೆಮ್ಸಿಗೆ ಸಲ್ಲುತ್ತದೆ, ನಾವು ಬಣ್ಣದ ಅನುಗುಣವಾಗಿ ಜೆಮ್ಸ್ ಹಂಚುತ್ತಿದ್ದರೂ, ಕಿರಿಯರಿಗೆ ನಮ್ಮ ಪಾಲಿಂದ ತಲಾ ಒಂದು ಜೆಮ್ಸ್ ನೀಡಬೇಕಿತ್ತು. ಹೀಗಾಗಿ ಲೆಕ್ಕಾಚಾರದಲ್ಲಿ ಎಂದೂ ತಪ್ಪಾಗದಂತೆ ನೋಡಿಕೊಳ್ಳುವ ಪಾಳಿ ನನ್ನದಾಗಿತ್ತು. ಸಾಲದೆಂಬಂತೆ ಪೋಷಕರು ಬಂದಾಗ ಒಂದೋ ಎರಡೋ ಜೆಮ್ಸ್‍ನ್ನು ನಮ್ಮ ಪಾಲಿಂದ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ದೊಡ್ಡವಳಾದ ನನಗೆ ಸಿಗುತ್ತಿದ್ದ ಜೆಮ್ಸ್ 2-3 ಅಷ್ಟೇ. ದುಂಡಗಿದ್ದ ಜೆಮ್ಸನ್ನು ಚೀಪುತಿದ್ದ ನಾವು, ಒಳಗಿನ ಚಾಕಲೇಟ್ ಸಿಗುವವರೆಗೆ ನಾಲಗೆಗೆ ಕೆಲಸ ಕೊಡುತ್ತಿದ್ದೆವು. ಹೊರಗಿನ ಬಣ್ಣ ಕರಗಿದ ನಂತರ ಚಾಕಲೇಟ್‍ನ್ನು ಹೊರತೆಗೆದು ಕ...