ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ? ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?! ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ? ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...
Comments
Post a Comment