Skip to main content

feature: Sutturu jatra mahotsava

ಜನಮನ ಸೆಳೆಯುವ ಸೊಬಗಿನ ಜಾತ್ರೆ
ಜನವರಿಯಲ್ಲಿ ಆರು ದಿನ ಜರಗುವ ಸುತ್ತೂರು ಜಾತ್ರೆ ಸಾಂಸ್ಕೃತಿಕ, ಐತಿಹಾಸಿಕ, ಜನಪದದ ಹಲವಾರು ಚಿತ್ರಣವನ್ನು ಕೊಡುತ್ತದೆ.



ಜಾತ್ರೆ ಎಂದ ತಕ್ಷಣ ನಮ್ಮೆಲ್ಲರ ಚಿತ್ರಣಕ್ಕೆ ಬರುವುದೇ ತೇರು , ಜನ ಜಂಗುಳಿ, ವಸ್ತು ಮಳಿಗೆ,ತಿಂಡಿ ಅಂಗಡಿ, ಪುಸ್ತಕಗಳ ಮಳಿಗೆ, ಹೀಗೆ ಹೆಚ್ಚು ಹಲವು ದೇಸಿಯ ಚಿತ್ರಣ ಮೂಡುತ್ತದೆ. ಅಯಾ ದೇಗುಲಗಳ ಪುರಾತನ ಪರಂಪರೆಯಿಂದ ನಡೆದು ಬಂದ ಸಂಪ್ರದಾಯದ ಪ್ರಕಾರ ಹಲವಾರು ಜಾಗಗಳಲ್ಲಿ, ಹಲವಾರು ಊರು . ಹಳ್ಳಿಗಳಲ್ಲಿ ಜಾತ್ರೆಯು ನಡೆದು ಬಂದಿರುತ್ತದೆ.
ಇದಕ್ಕೆ ಸುತ್ತೂರು ಮಠ ಓಂದು ನಿದರ್ಶನವಾಗಿ ನಿಂತಿದೆ. ನಂಜನಗೂಡು ತಾಲೂಕು ಮೈಸೂರು ಜಿಲ್ಲೆಯ ಕಪಿಲಾನದಿ ತೀರದಲ್ಲಿರುವ ಸತ್ತೂರು ಎಂಬ ಹಳ್ಳಿಯಲ್ಲಿ ಮಠದ ಸ್ಥಾಪನೆಯಾಗಿದೆ. ಸುತ್ತೂರು ಶ್ರೀಕ್ಷೇತ್ರವನ್ನು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ತಮ್ಮ ತಪಸ್ಸಿದ್ಧಿಯಿಂದ ೧೯೫೪ರಲ್ಲಿ ನೆಲೆಗೊಳಿಸಿದರು.
ಈ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಜಾತ್ರೆನಡೆಯುತ್ತದೆ.೫೦ ರಿಂದ ೬೦ವರ್ಷಗಳಿಂದ ನಡೆದು ಬಂದಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜನವರಿ ತಿಂಗಳಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯುತ್ತದೆ. ಪ್ರತೀ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭವಾಗುತ್ತದೆ.  ಜನವರಿಯಲ್ಲಿ,ಆರು ದಿನ ಜರುಗುವ ಈ ಜಾತ್ರೆಯು ಜನಪದ, ಸಾಂಸ್ಕೃತಿಕ, ಐತಿಹಾಸಿಕದ ಹಲವಾರು ವಿಚಾರಗಳ ಚಿತ್ರಣವನ್ನು ಕೋಡುತ್ತದೆ.ವಿವಿಧ ಶೈಲಿಯ ಜಾನಪದ ಪ್ರಕಾರಗಳನ್ನು ಮತ್ತು ಸೋಗಡನ್ನು ಇಲ್ಲಿನ ಜಾತ್ರೆಯಲ್ಲಿ ವಿಶೇಷವಾಗಿ ಪ್ರದರ್ಶಿಸಿರುತ್ತಾರೆ. ಆರು ದಿನದ ಜಾತ್ರೆಯಲ್ಲಿಪ್ರತೀ ದಿನ ಪ್ರತ್ಯೇಕವಾದ ಮತ್ತು ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸಿರಲಾಗುತ್ತದೆ. ಮೋದಲನೇ ದಿನ ಇಡೀ ಜಾತ್ರೆಯ ಆರಂಭೋತ್ಸವ ನಡೆಯುತ್ತದೆ.ಎರಡನೇ ದಿನ ರಾಜ್ಯ ಮಟ್ಟದ ಭಜನಾ ಮೇಳ, ಹಾಗು ದೇಸಿ ಆಟಗಳ ಸ್ಪರ್ಧೆಗಳು ನಡೆದರೆ ,  ಸಾಮೂಹಿಕ ಮದುವೆ ಕೂಡ ನಡೆಯುತ್ತದೆ ಹಲವಾರು ಬಡ ಕುಟುಂಬದ ವಧು,ವರರಿಗೆ ಸಾಮೂಹಿಕವಾಗಿ ಲಗ್ನ ನಡೆಯುತ್ತದೆ. ಸುಮಾರು ೧೦೦ರಿಂದ ೨೦೦ ದಂಪತಿಗಳು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಅದೂ ಅಲ್ಲದೆ ಪ್ರತೀ ತಿಂಗಳು ೧೦೦ ದಂಪತಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಪ್ಪದೇ ನಡೆಸಿಕೊಡುತ್ತಾರೆ.ಮೂರನೇ ದಿನ ಮುಖ್ಯವಾದ ರಥೋತ್ಸವ ನಡೆಯುತ್ತದೆ ಮತ್ತು ದನಗಳ ಜಾತ್ರೆ ಕೂಡ ಆ ದಿನದ ವಿಶೇಷಗಳಲ್ಲಿ ಒಂದು,ಇನ್ನು ನಾಲ್ಕನೇದಿನ ಸಿರಿವಂತ ಆಹಾರ- ಸಿರಿ ಧಾನ್ಯಗಳು , ಕೃಷಿ ವಿಚಾರಸಂಕಿರಣ , ಐದನೆಯ ದಿನ ಭಜನ ಮೇಳ, ಕುಸ್ತಿ ಪಂದ್ಯಾವಳಿ ಇರುತ್ತದೆ. ಅಂತಿಮ ದಿನದಂದು ಜಾತ್ರೆಯ ಸಮಾರೋಪ ನಡೆಯುತ್ತದೆ.
ಜಾತ್ರೆಯಲ್ಲಿ ಕೃಷಿ ಮೇಳ, ಆಹಾರ ಮೇಳ, ಕೈಮಗ್ಗ,ಜವಳಿ, ಕರಕುಶಲ ಉತ್ಪನ್ನಗಳು, ಕೈಗಾರಿಕೋತ್ಪನ್ನಗಳು, ಗೃಹಬಳಕೆ ವಸ್ತುಗಳು, ಪುಸ್ತಕ ಹಾಗೂ ಕಲಾ ಪ್ರದರ್ಶನವಿರುತ್ತದೆ. ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿದ ಶೈಕ್ಷಣಿಕ ಮಾದರಿಗಳ ಪ್ರದರ್ಶನ, ಆರೋಗ್ಯ ಮತ್ತು ವೈದ್ಯಕೀಯ ಪ್ರದರ್ಶನ ಇರುತ್ತದೆ. ಜಾತ್ರೆಯು ಇಡೀ ಊರಿನ ಹಬ್ಬದಂತೆ ಬದಲಾಗಿ ಹೋಗಿರುತ್ತದೆ.ವಿವಿಧತೆ, ವೈಶಿಷ್ಟ್ಯತೆ ಹಾಗೂ ಎಲ್ಲಾ ಸೊಗಡನ್ನು ಹೊತ್ತು, ತನ್ನದೇ ಶೈಲಿಯಲ್ಲಿ ರಾರಾಜಿಸುತ್ತಿರುವ ಜಾತ್ರೋತ್ಸವವನ್ನು ಕಾಣಲು ಜನಗಳು ಮುಗಿ ಬೀಳುತ್ತಾರೆ. ಹಲವಾರು ವರ್ಷಗಳಿಂದ ನಡೆದು ಬಂದಿರುವ ಈ ಜಾತ್ರೆ, ಎಲ್ಲರ ಕಣ್ಮನ ಸೆಳೆಯುತ್ತದೆ.
ಧಾರ್ಮಿಕ, ಆಧ್ಯಾತ್ಮಿಕ , ಸಾಮಜಿಕ, ಸಾಂಸ್ಕೃತಿಕ ಕಾಯಕ ದಾಸೋಹಗಳ ಸಂಕೇತವಾಗಿ ಜನಮನಗಳ ಗಮನ ಸೆಳೆದು, ಓಂದ್ದೊಳ್ಳೆ ಶ್ರದ್ಧ ಕೇಂದ್ರವಾಗಿ ಸುತ್ತೂರು ಕ್ಷೇತ್ರ ನಿದರ್ಷನವಾಗಿ ನಿಂತಿದೆ .ಅಷ್ಟೇ ಅಲ್ಲದೆ ಸುಮಾರುಮುನ್ನೂರು ವಿದ್ಯಾಸಂಸ್ಥೆಯನ್ನು ನಡೆಸುತ್ತಿದೆ. ಕರ್ನಾಟಕ, ತಮಿಳುನಾಡು,ಉತ್ತರ ಭಾರತ ಹಾಗು ಹೊರ ದೇಶದಲ್ಲಿಯೂ ಸ್ಥಾಪಿಸಿರುವ ಹೆಗ್ಗಳಿಕೆ ಇವರದಾಗಿದೆ.ಈ ಎಲ್ಲಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವರ್ಷಕ್ಕೊಮ್ಮೆ ಇರುವ ಈ ಜಾತ್ರೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ವಿಶೇಷ  ವಸ್ತು ಪ್ರದರ್ಶನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ವಿಶೇಷವಾದ ಸಂಗತಿ.
ಸಂಹಿತಾ.ಎಸ್.ಮೈಸೂರೆ,
ದ್ವಿತೀಯ ಪತ್ರಿಕೊದ್ಯಮ,
ಎಸ್.ಡಿ.ಎಂ ಕಾಲೇಜು ಉಜಿರೆ.

Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

BOQUE PREPARATION- EASY STEPS

ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ?  ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?!  ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ  ಸಂದರ್ಭಗಳಲ್ಲಿ  ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?  ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...