Skip to main content

write up about First speech

ಪಸ್ಟ್ ಸ್ಪೀಚ್ ಎಂಬ ಬೆಸ್ಟ್ ಪರಂಪರೆ

ಪತ್ರಕರ್ತನಾಗ ಬೇಕೆಂಬ ಹಂಬಲ ಅದರೊಂದಿಗಿಷ್ಟು ಕ್ರಿಯಾತ್ಮಕ ಬರವಣಿಗೆ ನಿರರ್ಗಳವಾದ ಮಾತುಗಾರಿಕೆ ಪೊಟೋಗ್ರಫಿ ಮೇಲೆ ಹಿಡಿತ ಸಾಧಿಸಬೇಕೆಂಬ ಛಲದೊಂದಿಗೆ ನಾನು ಆಯ್ಕೆ ಮಾಡಿಕೊಂಡ ಕಾಲೇಜು ಎಸ್.ಡಿ.ಎಂ ಉಜಿರೆ. ನಮ್ಮ ಪತ್ರಿಕೋದ್ಯಮ ತರಗತಿ ಅಲ್ಲಿ ಪಠ್ಯದ ಜೊತೆಗೆ ಮಾಧ್ಯಮ ಲೋಕದಲ್ಲಿ ಆಗುತ್ತಿರುವ ಆಗು ಹೋಗುಗಳು, ನಮ್ಮ  ಸುತ್ತಾ ಮುತ್ತದ ಸುದ್ದಿಗಳ ಬಗ್ಗೆ ಚರ್ಚೆಗಳು ನಡಿಯುತ್ತಲೇ ಇರುತ್ತದೆ. ತರಗತಿ ಆರಂಭವಾಗುವಕ್ಕಿಂತ ಮುಂಚೆ ದಿನಕೊಬ್ಬರಂತೆ ಯಾವುದಾದರು ಒಂದು ವಿಷಯದ ಬಗ್ಗೆ ೫ ನಿಮಿಷ ವೇದಿಕೆ ಹತ್ತಿ ಮಾತನಾಡಬೇಕು.

ಅಂದು ಒಂದು ದಿನ ನಾನು ಬೆಳಗ್ಗೆ ಏಳುವಾಗಲೇ ತಡವಾಗಿತ್ತು, ಇಂದು ನನ್ನ ದಿನಚರಿ ಸರ್‌ನ ಬೈಗುಳದೊಂದಿಗೆ ಶುರುವಾಗುವುದೆಂದು ಅಂಜುತ್ತಲೇ ತರಗತಿಗೆ ತೆರಳಿದೆ. ಆದರೆ ಅಂದು ಆಗಿದ್ದೇ ಬೇರೆ ತರಗತಿಗೆ ಪ್ರಾಧ್ಯಪಕರು ಅವಗತಾನೆ ಬಂದಿದ್ದರು, ಬದುಕಿತೋ ಬಡಜೀವವು ಅಂದುಕೊಳ್ಳುತ್ತಲೇ ಖಾಯಂ ಕುಳಿತುಕೊಳ್ಳುವ ಜಾಗದಲ್ಲಿ ಕುಳಿತುಕೊಂಡೆ.

ಸಂಕಟದಿಂದ ಪಾರು ಮಾಡಿದೆ ಗಣೇಶ ಅಂದುಕೊಳ್ಳುವಷ್ಟರಲ್ಲೇ ಪಕ್ಕದಲ್ಲೇ ಕುಳಿತ  ನನ್ನ  ಗೆಳೆಯನ ಅಶರೀರವಾಣಿ ಕೇಳಿಸಿತು,ಇವತ್ತು ನಿಂದೇ ಫಸ್ಟ್‌ಸ್ಪೀಚೆಂದು. ಮಾತುಗಾರಿಕೆಯೆಂದರೆ ನನಗೆ ಬಲು ಇಷ್ಟ ಆದರೆ ನನಗೆ ಸ್ವಲ್ಪ ಸ್ಟೇಜ್ ಫಿಯರ್, ಸ್ಟೇಜ್ ಮೇಲೆ ಹತ್ತಿದರೆ ಸಾಕು ಹೇಳಬೇಕೆಂದುಕೊಂಡದ್ದೆಲ್ಲ ಮರೆತು ಹೋಗುತ್ತದೆ. ಪ್ರಾಧ್ಯಪಕರು ಹಾಜರಿ ಹಾಕುವಷ್ಟು ಸಮಯ ಏನು ಮಾತಾನಾಡುವುದೆಂದು ಯೋಚಿಸಿದೆ ಆ ಕ್ಷಣಕ್ಕೆ ಏನು ತೋಚಲಿಲ್ಲ, ತರಗತಿಯ ಎಲ್ಲಾ ಸಹಪಾಠಿಗಳು ನನ್ನನ್ನೇ ನುಂಗುವಂತೆ  ನೋಡುತ್ತಿದ್ದರು. ಬೆಳಗೆದ್ದು ಯಾರ  ಮುಖವನ್ನು ನೋಡಿದ್ನೋ ಗೊತ್ತಿಲ್ಲ. ಮೊದಲೆ ಇಂದು ನನ್ನ ಸರದಿ ಎಂದು ತಿಳಿದಿದ್ದರೆ ಬಂಕ್ ಹಾಕಬಹುದಿತ್ತು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು  ಮನಸ್ಸಲ್ಲಿ ಎಲ್ಲಾ ದೇವರನ್ನು ನೆನೆಸಿಕೊಂಡು ವಿಷಯಗಳನ್ನು ಹುಡುಕಾಡುವಾಗ, ನನಗೆ ನೆನಪಿಗೆ ಬಂದಿದ್ದೇ ಎನ್.ಎಸ್.ಎಸ್ ಕಾರ್ಯಕ್ರಮ.

 ನಮ್ಮ ಕಾಲೇಜಿನಲ್ಲಿ ಹಿಂದಿನ ವಾರ  ಎನ್.ಎಸ್.ಎಸ್ ವತಿಯಿಂದ ವ್ಯಕ್ತಿತ್ವ ವಿಕಸನ, ಮಾದಕ ವ್ಯಸನ ಮುಕ್ತಿ  ಕಾರ್ಯಕ್ರಮ ನಡೆದಿತ್ತು. ನನಗೆ ಆ ಕ್ಷಣಕ್ಕೆ ಸಿಕ್ಕ ವಿಷಯವು ಅದೇ ಆಗಿತ್ತು. ನನ್ನ ಮನಸ್ಸು ಸ್ವಲ್ಪ ಹಗುರವಾಯ್ತು , ಮನಸ್ಸಿನ ಒಳಗೆ ಕೊಂಚ ಹೆದರಿಕೆ ಆಗುತ್ತಿತ್ತು ಆದರು ಅದನ್ನು ವ್ಯಕ್ತಪಡಿಸದೆ ಸ್ಟೇಜಿನ ಮೇಲೆ ನಿಂತು ಮಾತು ಶುರು ಮಾಡಿದೆ

ಗಟ್ಟಿ ಧ್ವನಿಯಲ್ಲಿ ಮಾತು ಶುರುಮಾಡಿದೆ ಹೇಳಿ ಕೇಳಿ ನಾನು ಕುಂದಾಪುರದ ಹೈದ ನಾನು ಮಾತನಾಡುವ ಕನ್ನಡ ಇವರಿಗೆ ಸರಿಯಾಗಿ ಅರ್ಥ ಆಗಲಿಕ್ಕಿಲ್ಲ ಅನ್ನುವ ಸಣ್ಣ ಭಯ ಮನದ ಮೂಲೆಯಲ್ಲಿ ಮೂಡಿತು, ನೋಡುಗರಿಗೆ ಹೋ ಇವನಿಗೆ ಏನೋ ಗೊತ್ತು ಅನ್ನಿಸುವ ಹಾಗೆ ಹಾವ ಭಾವ ದೊಂದಿಗೆ ಮಾತು ಆರಂಭಿಸಿದೆ. ಅಂತೂ ಇಂತೂ ಕೊನೆಗೂ ೫ ನಿಮಿಷ ಬಾಷಣ ಮುಗಿಸಿ ನನ್ನ ಜಾಗ ಸೇರುವುದರಷ್ಟರಲ್ಲೇ ಮಳೆಗಾಲದಲ್ಲು ಬೆವರಿಳಿದು ಹಾಕಿದ ಅಂಗಿ ಸಂಪೂರ್ಣ ಒದ್ದೆಯಾಗಿತ್ತು.  ಸಹಪಾಠಿಗಳ ಎದುರು ನಿಂತು  ನಿರರ್ಗಳವಾಗಿ ಮಾತನಾಡುವುದರಿಂದ ನಮ್ಮಲ್ಲಿ ವಿಷಯ ಸಂಗ್ರಹಣೆ, ಮತ್ತು ಮಾತನಾಡುವ ಧೈರ್ಯ ಬರುತ್ತದೆ ಎಂಬುದಂತೂ ನನಗೆ ಅಂದು ತಿಳಿದು ಬಂದ ಪಾಠ.

ನಮ್ಮ ಪತ್ರಿಕೋದ್ಯಮ ತರಗತಿಯಲ್ಲಿ ಈ ಪಸ್ಟ್‌ಸ್ಪೀಚ್ ಎಂಬುದು ತುಂಬಾ ಉತ್ತಮವಾದ ವೇದಿಕೆ, ಈ ಪರಂಪರೆಯಿಂದ  ನನ್ನಂತಾ  ಎಷ್ಟೋ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ, ಮತ್ತು ಪಡೆದುಕೊಳ್ಳುವವರು ಇನ್ನೂ ತುಂಬಾ ಮಂದಿ ಇದ್ದಾರೆ, ಸ್ಟೇಜ್ ಫಿಯರ್ ಹೋಗಲಾಡಿಸಲು ಬಳಸುವ ಈ ಅಸ್ತ್ರ ನಿಜಕ್ಕೂ ಶ್ಲಾಘನೀಯ.  


  ಬಾಲಚಂದ್ರ ಶೆಟ್ಟಿ ಶೇರ್ಡಿ 

  ದ್ವಿತೀಯ ಪತ್ರಿಕೋದ್ಯಮ

  ದೂ.ಸಂ೭೦೨೬೫೪೯೯೮೩                                                          

 





Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

BOQUE PREPARATION- EASY STEPS

ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ?  ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?!  ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ  ಸಂದರ್ಭಗಳಲ್ಲಿ  ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?  ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...