ಇದಕ್ಕಿಂತ ಮಿಗಿಲಾದದ್ದು ಇದೆಯೇ? ’ಕಡುಬು’ ಈ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ. ನೋಡಲು ಇದೊಂತರ ಏಕದಿನ ಹಾಗೂ ಟಿ-೨೦ ಕ್ರಿಕೆಟ್ನಲ್ಲಿ ಉಪಯೋಗಿಸುವ ಬಾಲಿನಂತಿದೆ. ಕರಾವಳಿ ಪ್ರದೇಶದಲ್ಲಂತೂ ಇದರದ್ದೇ ಕಾರುಬಾರು. ಯಾವ ಹೋಟೆಲಲ್ಲೂ ನೋಡಿದ್ರೂ ಇದರ ಹೆಸ್ರು ಇದ್ದೇ ಇರಯತ್ತದೆ. ಇದು ಇಲ್ಲಾಂದ್ರೆ ಮಾಲಿಕರಿಗೆ ಅಂದು ಲಾಭವೇ ಇಲ್ಲ. ಹೆಸ್ರು ಕೇಳುವಾಗ ನಗು ಬರುತ್ತೆ. ಪುಂಡಿ, ಪಿಂಡಿ, ಕಡುಬು, ಮುಟ್ಲಿ ಹಾಗೂ ಮುಂತಾದ ಹೆಸ್ರಲ್ಲಿ ಇದನ್ನು ಕರೆಯುತ್ತಾರೆ. ಅಕ್ಕಿಯ ಹಿಟ್ಟನ್ನು ಚೆನ್ನಾಗಿ ಕಲಸಿ ನಂತರ ಅದನ್ನು ಬಾಲಿನ ರೂಪಕ್ಕೆ ತಂದು ಬೇಯಿಸುತ್ತಾರೆ. ಇದನ್ನು ಬೇಯಿಸಲೆಂದೇ ವಿಶೇಷ ಪಾತ್ರೆ ಇದೆ. ಇದರ ತಳ ಭಾಗದಲ್ಲಿ ನೀರು ತುಂಬಿಸಿ ಮಧ್ಯ ಭಾಗದಲ್ಲಿ ಒಂದು ಮುಚ್ಚಲೆ ಇಟ್ಟು ನಂತರ ಪುಂಡಿಗಳನ್ನು ಇಟ್ಟು ಬೇಯಿಸುತ್ತಾರೆ. ಬೇಯಿಸುವಾಗ ತಳಬಾಗದಲ್ಲಿರುವ ನೀರು ಕುದಿಯುವಾಗ ಕಡುಬಿನ ಸುವಾಸನೆ ನಿಜಕ್ಕೂ ಅದ್ಭುತವಾಗಿರುತ್ತದೆ. ಯಾವಾಗೊಮ್ಮೆ ಕೈಗೆ ಸಿಗುತ್ತದೆ ಎಂದು ಕಾತುರದಿಂದ ಕಾಯುತ್ತೇವೆ. ಕಡುಬು ಆಕಾರ, ಶೈಲಿ, ರುಚಿ ಎಲ್ಲವು ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಇರುತ್ತದೆ. ಕೆಲವೊಂದು ಮನೆಗಳಲ್ಲಿ ಕೂಡಾ ಅವರದ್ದೇ ಆದ ಆಕಾರ, ಶೈಲಿ ಇರುತ್ತದೆ. ಕಡುಬಿನ ಗುಣಮಟ್ಟವೂ ಅದರ ರೂಪದ ಮೇಲೆ ಅವಲಂಬಿತವಾಗಿರುತ್ತದೆ. ತಯಾರಿಸಲು ಪ್ರತ್ಯೇಕ ಅನುಭವವೋ ಅಥವಾ ಟ್ರೈನಿಂಗ್ ಬೇಕಾಗಿಲ್ಲ. ಒಮ್ಮೆ ನೋಡಿದ್ರೆ ಸಾಕು ಮ...
CHIGURU is a platform for blooming writers to explore their creativity in the form of writings.