ವಾ.... ಇಡ್ಲಿ ವಡೆ ಸಾಂಬಾರ್
ಇಡ್ಲಿ-ವಡೆ ಸಾಂಬರ್ ಆಹಾ ನೆನೆಸ್ಕೊಂಡ್ರೆ ಬಾಯಲ್ಲಿ
ನೀರು ಬರುತ್ತೆ......ಅಬ್ಬಾ ಎಂತಹ ಕಾಂಬಿನೇಷನ್ ಅಲ್ವಾ, ಇಡ್ಲಿ ಮತ್ತೆ
ವಡೆಯದ್ದು. ಯಾವುದೇ ಸಮಾರಂಭ ಆದರೂ ಮೊದಲಿಗೆ ನೆನಪಾಗುವುದು ಇಡ್ಲಿ ವಡೆ. ಯಾವ ಫಾಸ್ಟ್-ಫುಡ್
ತಿಂಡಿಯ ಮುಂದೆ ಇಡ್ಲಿಗೆ ಸರಿಸಾಟಿ ಯಾವುದೂ ಇಲ್ಲ. ಅಬ್ಬಾ ಅದರ ರುಚಿ ನೆನೆಸಿಕೊಂಡರೆ ನಾಲಿಗೆ ನೀರೂರುತ್ತದೆ.
ಇಡ್ಲಿಯನ್ನು, ವಡೆಯನ್ನು ಸೇರಿಸಿ ಅದಕ್ಕೆ
ಸಾಂಬಾರ್ ಹಾಕಿ ಮಿಕ್ಸ್ ಮಾಡಿ ತಿಂದ್ರಂತೂ, ಆಹಾ ಯಾವ ಅಮೃತಕ್ಕೂ ಕಡಿಮೆ ಇಲ್ಲಾ. ಈಗಲೂ ಅದೆಷ್ಟೋ
ಜನರಿದ್ದಾರೆ ಹೋಟೆಲಿಗೆ ಹೋಗಿಯೇ ಇಡ್ಲಿ-ವಡೆ ತಿನ್ನುವವರು. ನಾನು ಮನೆಗೆ ಹೋಗುವಾಗ ಮನೆ ಹತ್ತಿರದ
ಹೋಟೆಲಿನ ಇಡ್ಲಿ-ವಡೆಯ ಪರಿಮಳವೂ ನೇರವಾಗಿ ನನ್ನನ್ನು ಹೋಟೆಲ್ ಬಳಿಗೆ ಕಳಿಸುವಂತೆ ಮಾಡುತ್ತದೆ.
ಕಿಲಾಡಿ-ಜೋಡಿ ಅವಾರ್ಡ ಏನಾದರೂ ಮಾಡಿದ್ರೆ ಅದು ಇಡ್ಲಿ-ವಡೆಗೆಯೇ ಸಿಗುತ್ತದೆ. ಯಾಕಂದ್ರೆ
ನೀವು ಯಾವ ನೂಡಲ್ಸ್, ಸಾಸ್, ಪಿಝ್ಝ, ಬರ್ಗರ್, ಬೇಕಾದ್ರು
ತಿನ್ನಿ ಅದರಲ್ಲಿ ನಿಮಗೆ ಸಿಗುವ ತೃಪ್ತಿಗಿಂತ ಬರೀ ಇಡ್ಲಿ- ವಡೆಯ ಸ್ವಾದವೇ ಬೇರೆ. ಅಷ್ಟೇ ಅಲ್ಲ
ಇಡ್ಲಿ-ವಡೆ ಬಂದಿರುವುದು ನಮ್ಮ ಪೂರ್ವಕಾಲದಿಂದ. ಮನೆಯಲ್ಲೇ ತಯಾರು-ಮಾಡಿ ತಿನ್ನಬಹುದಾದಂಥದ್ದು.
ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಷ್ಟು ರುಚಿಯೋ ಅಷ್ಟೇ
ಆರೋಗ್ಯಕರವಾಗಿರುವಂಥದ್ದು. ನಮ್ಮ ಹಳೆಯ ಸಂಸ್ಕೃತಿಗೆ ಪೂರಕವಾಗಿ ಇಡ್ಲಿ-ವಡೆಯು ಇಂದಿನ ಕಾಲಕ್ಕೆ
ಪ್ರಸಿದ್ಧಿಯಾಗಿದೆ.
ಅದೆಷ್ಟೋ ಕಾಲದಿಂದಲೂ ಉಳಿದಿರುವ ಕೆಲವು ತಿನಿಸುಗಳಲ್ಲಿ ಇಡ್ಲಿ-ವಡೆಯು ಒಂದು.
ಒಮ್ಮೆಯಾದರೂ ಇಡ್ಲಿ-ವಡೆಗೆ ಸಾರು ಅಥವಾ ಸಾಂಬಾರು ಹಾಕಿ ಮಿಕ್ಸ್ ಮಾಡಿ ತಿಂದು ಖುಷಿ ಪಟ್ಟು
ಆನಂದಿಸಿ.
ಆದಿತ್ಯ
ದ್ವಿತೀಯ ಪತ್ರಿಕೋದ್ಯಮ
Comments
Post a Comment