ಮನಸ್ಸರಳಿಸುವ ಮನೀಷಾ
ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಂದರೆ ಅದು ಅವಕಾಶಗಳ ಸಾಗರವಿದ್ದಂತೆ. ಇಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಭಿವ್ಯಕ್ತ ಪಡಿಸಲು ಅನೇಕ ಅವಕಾಶಗಳಿವೆ. ಅದರಲ್ಲಿ ಬಹಳ ಪ್ರಮುಖವೆಂದರೆ ಕಾಲೇಜಿನ ಎಲ್ಲ ಕಾರ್ಯಚಟುವಟಿಕೆಗಳನ್ನು, ವಿದ್ಯಾರ್ಥಿ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವುದರ ಮೂಲಕ ಎಲ್ಲರ ಮನಸ್ಸನ್ನು ಅರಳಿಸುವ ಮನೀಷಾ ಇದು ನಮ್ಮ ಕಾಲೇಜಿನ ಸವಿವರಗಳನ್ನು ತೆರೆದಿಡುವ ವಾರ್ಷಿಕ ಸಂಚಿಕೆ.ವಿದ್ಯಾರ್ಥಿಗಳ ಪ್ರತಿಭೆಗೆ ಕೈಗನ್ನಡಿಯಂತೆ ಇರುವ ಮನೀಷಾ ನಾಡಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾದುದು. ಇಲ್ಲಿ ಪ್ರಾಧ್ಯಾಪಕರ ಶ್ರಮ ,ವಿದ್ಯಾರ್ಥಿಗಳ ಪರಿಶ್ರಮ ಗಮನಿಸಬೇಕಾದ ಅಂಶ. ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕಾಲೇಜುಗಳು ಇದ್ದು ಇವುಗಳೆಲ್ಲವೂ ಕೂಡ ತಮ್ಮ ವಾರ್ಷಿಕ ಸಂಚಿಕೆಯನ್ನು ಸ್ಪರ್ಧೆಗಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತವೆ. ಆದರೂ ಕೂಡ ಹೆಚ್ಚಿನ ಭಾರಿ ಪ್ರಥಮ ಬಹುಮಾನವನ್ನು ಬಾಚಿರುವುದು ಮನೀಷಾ ಎಂಬುದು ನಮ್ಮೆಲ್ಲರ ಹೆಮ್ಮೆ.
ಮನೀಷಾ ಎಂಬುದು ಬೌದ್ಧಿಕ ಚಟುವಟಿಕೆ .ಇದರಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ,ಸಾಹಿತ್ಯಿಕ, ಕ್ರೀಡಾ ಹಾಗೂ ಶೈಕ್ಷಣಿಕ ಸಾಧನಾ ವಿವರಗಳನ್ನು ಅಲ್ಲದೆ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಯಾವೆಲ್ಲ ಸೌಲಭ್ಯಗಳನ್ನು ಒದಗಿಸಿವೆ ಎಂಬ ಮಾಹಿತಿಯನ್ನು ತೆರೆದಿಡುತ್ತದೆ. ಇದರ ವಿಶೇಷತೆ ಏನೆಂದರೆ ಪ್ರಮುಖ ಭಾಷೆಗಳಾದ ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ ಸೇರಿದಂತೆ ಸುಮಾರು ೩೪ ಭಾಷೆಗಳ ಬರಹಗಳು ಈ ಸಂಚಿಕೆಯಲ್ಲಿ ಅಡಕಗೊಂಡಿದೆ. ಸುಮಾರು ೧೦ ವರ್ಷಗಳ ಕಾಲ ಇದರ ನೇತೃತ್ವ ವಹಿಸಿಕೊಂಡು ಅತ್ಯುತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಿ.ನಾಗರಾಜಪ್ಪ ಇವರನ್ನು ಇದರ ಕುರಿತು ವಿಚಾರಿಸಿದಾಗ ತಮ್ಮ ಹಲವಾರು ಅನುಭವಗಳನ್ನು ತೆರೆದಿಟ್ಟರು. ಹೆಚ್ಚಿನ ಸಂಶೋಧನಾ ಲೇಖನಗಳು ಮನೀಷಾಕ್ಕೆ ಬಂದು ಇನ್ನು ಹೆಚ್ಚು ಪ್ರಸಿದ್ಧಿ ಪಡೆಯಲಿ ಎಂದು , ಹಲವು ಭಾರಿ ಪ್ರಥಮ ಬಹುಮಾನ ಬಂದದಕ್ಕೆ ಸಂತಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾರಿಯಾಗಿರುವ ಮನೀಷಾ ಎಲ್ಲರ ಮನಸ್ಸು ಗೆದ್ದು ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ
.
ರಾಹುಲ್ ಎಸ್ ಎಂ
ದ್ವಿತೀಯ ಪತ್ರಿಕೋದ್ಯಮ
ದೂರವಾಣಿ: 9900780203
Comments
Post a Comment