ಇದಕ್ಕಿಂತ ಮಿಗಿಲಾದದ್ದು ಇದೆಯೇ?
ಹೆಸ್ರು ಕೇಳುವಾಗ ನಗು ಬರುತ್ತೆ. ಪುಂಡಿ, ಪಿಂಡಿ, ಕಡುಬು, ಮುಟ್ಲಿ ಹಾಗೂ ಮುಂತಾದ ಹೆಸ್ರಲ್ಲಿ ಇದನ್ನು ಕರೆಯುತ್ತಾರೆ. ಅಕ್ಕಿಯ ಹಿಟ್ಟನ್ನು ಚೆನ್ನಾಗಿ ಕಲಸಿ ನಂತರ ಅದನ್ನು ಬಾಲಿನ ರೂಪಕ್ಕೆ ತಂದು ಬೇಯಿಸುತ್ತಾರೆ. ಇದನ್ನು ಬೇಯಿಸಲೆಂದೇ ವಿಶೇಷ ಪಾತ್ರೆ ಇದೆ. ಇದರ ತಳ ಭಾಗದಲ್ಲಿ ನೀರು ತುಂಬಿಸಿ ಮಧ್ಯ ಭಾಗದಲ್ಲಿ ಒಂದು ಮುಚ್ಚಲೆ ಇಟ್ಟು ನಂತರ ಪುಂಡಿಗಳನ್ನು ಇಟ್ಟು ಬೇಯಿಸುತ್ತಾರೆ. ಬೇಯಿಸುವಾಗ ತಳಬಾಗದಲ್ಲಿರುವ ನೀರು ಕುದಿಯುವಾಗ ಕಡುಬಿನ ಸುವಾಸನೆ ನಿಜಕ್ಕೂ ಅದ್ಭುತವಾಗಿರುತ್ತದೆ. ಯಾವಾಗೊಮ್ಮೆ ಕೈಗೆ ಸಿಗುತ್ತದೆ ಎಂದು ಕಾತುರದಿಂದ ಕಾಯುತ್ತೇವೆ.
ಕಡುಬು ಆಕಾರ, ಶೈಲಿ, ರುಚಿ ಎಲ್ಲವು ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಇರುತ್ತದೆ. ಕೆಲವೊಂದು ಮನೆಗಳಲ್ಲಿ ಕೂಡಾ ಅವರದ್ದೇ ಆದ ಆಕಾರ, ಶೈಲಿ ಇರುತ್ತದೆ. ಕಡುಬಿನ ಗುಣಮಟ್ಟವೂ ಅದರ ರೂಪದ ಮೇಲೆ ಅವಲಂಬಿತವಾಗಿರುತ್ತದೆ. ತಯಾರಿಸಲು ಪ್ರತ್ಯೇಕ ಅನುಭವವೋ ಅಥವಾ ಟ್ರೈನಿಂಗ್ ಬೇಕಾಗಿಲ್ಲ. ಒಮ್ಮೆ ನೋಡಿದ್ರೆ ಸಾಕು ಮತ್ತೆ ತಾನೇ ತಯಾರಿಸಬಲ್ಲೇ ಎಂದು ಹೇಳುತ್ತಾರೆ.
ಕೆಲವೊಂದು ಕಡುಬುಗಳನ್ನು ನೋಡಿದ್ರೆ ಅದು ರಸ್ತೆಗೆ ಡಾಂಬಾರು ಹಾಕುವ ಮೊದಲು ಹಾಕುವ ಕಲ್ಲೋ ಅಥವಾ ತಡುಬೋ ಎಂದು ಗೊತ್ತಾಗಲ್ಲ. ಯಾಕಂದ್ರೆ ಅಷ್ಟು ಗಟ್ಟಿಯಾಗಿರುತ್ತದೆ. ಎಷ್ಟೇ ಮೇಲಕ್ಕೆಸೆದು ಕೆಳಗೆ ಬಿದ್ರೆ ಎನೂ ಆಗಲ್ಲ. ಇದರಲ್ಲೇ ಗೊತ್ತಾಗುತ್ತೆ ಅದರ ಗುಣಮಟ್ಟ. ಮತ್ತೆ ಕೆಲವು ಕಾಣುವಾಗಲೇ ಕೆಲವರು ನುಂಗಿಬಿಡ್ತಾರೆ, ಅಷ್ಟು ಮೃದುವಾಗಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಮೃದು ಕಡುಬು ಎಲ್ಲರಿಗೂ ಇಷ್ಟ. ಹೋಟೇಲುಗಳಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಹೋದ್ರೆ ಕಡುಬು ಬೇಕಾ ಅಲ್ಲ ಬೇರೆ ಏನಾದ್ರು ಬೇಕಾ ಎಂದು ಕೇಳ್ತಾರೆ.
ಹಲವು ವರ್ಷಗಳ ಇತಿಹಾಸವಿರುವ ಇದು ಇಂದಿಗೂ ಜನಮನ್ನಣೆ ಗಳಿಸಿದ ವಿಶೇಷ ಆಹಾರವಾಗಿದೆ. ಪ್ರತೀ ಮನೆಗಳಲ್ಲೂ ಕೂಢ ಇದನ್ನು ತಯಾರಿಸಿತ್ತಾರೆ. ಹಾಸ್ಟೇಲು, ಪಿಜಿ. ಮೆಸ್ ಗಳಲ್ಲಿ ಕಡುಬು ಇದ್ದೇ ಇರುತ್ತದೆ. ವಾರದಲ್ಲಿ ಒಮ್ಮೆಯಾದ್ರು ಇದನ್ನು ತಿನ್ನದಿದ್ದರೆ ಆ ವಾರ ಆರೋಗ್ಯಕರವಾಗಿರೋದಿಲ್ಲ.
ಅಂದ ಹಾಗೆ ನೀವು ಕಡುಬನ್ನು ತಿಂದಿದ್ದೀರಾ?
_ಮಹಮ್ಮದ್ ಸಫ್ವಾನ್
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಪದವಿ ಕಾಲೇಜು ಉಜಿರೆ
Comments
Post a Comment