Skip to main content

Posts

Reach ME...

Recent posts

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

Gems -write up

ಕಾಡುವ GEMSನ ನೆನಪು ಜೆಮ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದಲ್ಲಿ ನನಗಿಷ್ಟವಾಗಿದ್ದ ಚಾಕಲೇಟ್ ಅಂದರೆ ಅದು ಜೆಮ್ಸ್. ಅಮ್ಮ, ಅಪ್ಪ ಪೇಟೆಗೆ ಹೋಗುತ್ತಿದ್ದಾಗ, ನೆಂಟರಿಷ್ಟರು ಮನೆಗೆ ಬರುತ್ತಿದ್ದಾಗ ತಪ್ಪದೇ ಎರಡು ಪಾಕೆಟ್ ಜೆಮ್ಸ್ ತರುತ್ತಿದ್ದರು. ದುಂಡಗಿದ್ದ ಅದನ್ನು ನಾವು “ಚಾಕಿ ಮಾತ್ರೆ” ಎಂದು ಕರೆಯುತ್ತಿದ್ದೆವು. ಬೇಸಿಗೆ ರಜೆಯಲ್ಲಿ ಸೋದರ ಸಂಬಂಧಿಗಳು ಬಂದಾಗ ಸೋದರ ಸೋದರಿಯರಿಗೆ ಸಮವಾಗಿ ಹಂಚುವ ಜವಾಬ್ದಾರಿ ಹಿರಿಯವಳಾದ ನನ್ನದಾಗಿತ್ತು. ನಾವು ಐದಾರು ಜನ 2 ಪಾಕೆಟನ್ನು ಹಂಚಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೆವು. ಬಣ್ಣದ ಅನುಗುಣವಾಗಿ ಸಮಪಾಲು ಮಾಡುತ್ತಿದ್ದೆವು. ಗಣಿತ ಮೇಷ್ಟ್ರು ಬಹುಶಃ ನನಗೆ ಬೇಸಿಕ್ ಗಣಿತ ಹೇಳಿಕೊಟ್ಟ ಕೀರ್ತಿ ಜೆಮ್ಸಿಗೆ ಸಲ್ಲುತ್ತದೆ, ನಾವು ಬಣ್ಣದ ಅನುಗುಣವಾಗಿ ಜೆಮ್ಸ್ ಹಂಚುತ್ತಿದ್ದರೂ, ಕಿರಿಯರಿಗೆ ನಮ್ಮ ಪಾಲಿಂದ ತಲಾ ಒಂದು ಜೆಮ್ಸ್ ನೀಡಬೇಕಿತ್ತು. ಹೀಗಾಗಿ ಲೆಕ್ಕಾಚಾರದಲ್ಲಿ ಎಂದೂ ತಪ್ಪಾಗದಂತೆ ನೋಡಿಕೊಳ್ಳುವ ಪಾಳಿ ನನ್ನದಾಗಿತ್ತು. ಸಾಲದೆಂಬಂತೆ ಪೋಷಕರು ಬಂದಾಗ ಒಂದೋ ಎರಡೋ ಜೆಮ್ಸ್‍ನ್ನು ನಮ್ಮ ಪಾಲಿಂದ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ದೊಡ್ಡವಳಾದ ನನಗೆ ಸಿಗುತ್ತಿದ್ದ ಜೆಮ್ಸ್ 2-3 ಅಷ್ಟೇ. ದುಂಡಗಿದ್ದ ಜೆಮ್ಸನ್ನು ಚೀಪುತಿದ್ದ ನಾವು, ಒಳಗಿನ ಚಾಕಲೇಟ್ ಸಿಗುವವರೆಗೆ ನಾಲಗೆಗೆ ಕೆಲಸ ಕೊಡುತ್ತಿದ್ದೆವು. ಹೊರಗಿನ ಬಣ್ಣ ಕರಗಿದ ನಂತರ ಚಾಕಲೇಟ್‍ನ್ನು ಹೊರತೆಗೆದು ಕ...

ಓದಿದ್ದ ಒಂದು ಕಾದಂಬರಿಯ ಸಾಲು

ಓದಿದ್ದ ಒಂದು ಕಾದಂಬರಿಯ ಸಾಲು ನೀರವ ಮೌನ , ಸದಾ ಬಸ್ಸಿನಲ್ಲಿ ಬರುವಾಗ ತಂಪಾದ ಗಾಳಿ ನನ್ನ ಮುಂಗುರುಳನ್ನು ಒಮ್ಮೆ ಸೋಕಿ ಹೋಗುವಾಗ ತುಟಿಯ ಅಂಚಿನಲ್ಲಿ ಚಿಕ್ಕ ನಗು ಮೂಡುತ್ತಿದ್ದ ನನ್ನ ಮುಖದಲ್ಲಿ ಅಂದು ಆ ನಗು ಮಾಯವಾಗಿತ್ತು . ಗಾಳಿ ಬಂದು ಮುಂಗುರುಳನ್ನು ತಾಕಿದಾಗ ಕಿರಿಕಿರಿಯ ಅನುಭವ . ಪಕ್ಕದಲ್ಲಿ ಕುಳಿತ್ತಿದ್ದ ಗೆಳತಿಗೆ ' ಸದಾ ಪಟ ಪಟ ಮಾತಾಡುವ ಇವಳು ಇಂದು ಮೌನ ಮೂರ್ತಿಯಾಗಿದ್ದಾಳಲ್ಲ , ಏಕೆ ?' ಎಂಬ ಪ್ರಶ್ನೆ ಮೂಡಿತ್ತೋ ಏನೋ ?!!. ತುಂಬ ದಿನಗಳ ನಂತರ ಮನೆಗೆ ಹೋಗುತ್ತಿದ್ದ ನನಗೆ ಅಂದು ಮೊದಲು ಇರುತ್ತಿದ್ದ ಖುಷಿ ಇರಲ್ಲಿಲ್ಲ . ಖುಷಿ ಪಡಬೇಕು , ಖುಷಿಯಾಗಿ ಮನೆಗೆ ಹೋಗಬೇಕು ಎಂದು ಎಷ್ಟು ಪ್ರಯತ್ನಿಸಿದರೂ , ಮುಖದಲ್ಲಿ ನಗು ಮೂಡುವ ಮೊದಲೇ ಮನಸ್ಸು ಆ ನಗುವಿಗೆ ಬೇಸರ ಎಂಬ ಕಡಿವಾಣ ಹಾಕುತ್ತಿತ್ತು . ಬಸ್ ಸ್ಟಾಂಡ್ನಲ್ಲಿ ಬಸ್ ನಿಂತ ತಕ್ಷಣ ಎದುರಿಗೆ ಕಂಡ ಅಂಗಡಿಯ ಹೆಸರು ಸಾವಿತ್ರಿ ಎಂದಿತ್ತು . ಅದನ್ನು ನೋಡಿದ ಕೂಡಲೆ ಅಮ್ಮನ ನೆನಪಾಯಿತು . ಆಗಿಂದಾಗಲೇ ಬ್ಯಾಗ್   ಅನ್ನು ಕೆಳಗೆ ಇಳಿಸಿ ತೊಡೆಯ ಮೇಲೆ ಇಟ್ಟುಕೊಂಡು ಬಹಳ ದಿನದಿಂದ ಕೂಡಿಟ್ಟ ದುಡ್ಡಿನಲ್ಲಿ ಅಮ್ಮನಿಗೋಸ್ಕರ ಕೊಂಡುಕೊಂಡ ಸಿಲ್ಕ್ ಸೀರೆ ತೆಗೆದು ಒಮ್ಮೆ ಗಟ್ಟಿಯಾಗಿ ಅದನ್ನು ಅಪ್ಪಿಕೊಂಡೆ . ಆ ಕ್ಷಣ ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹರಿಯಲು ಶುರುವಾಯಿತು . ಅವತ್ತಿನವರೆಗೂ ಅಮ್ಮನಿಗೆ ಆ ಸೀರೆಯನ್ನು ನಾನೆ ಉಡಿಸಿ ಅವಳನ್ನು ಕಣ್ಣುತುಂಬ ನೋಡ್ಬೇಕ...

Kadubu... aha..yentha ruchi!!!

 ಇದಕ್ಕಿಂತ ಮಿಗಿಲಾದದ್ದು ಇದೆಯೇ? ’ಕಡುಬು’ ಈ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ. ನೋಡಲು ಇದೊಂತರ ಏಕದಿನ ಹಾಗೂ ಟಿ-೨೦ ಕ್ರಿಕೆಟ್ನಲ್ಲಿ ಉಪಯೋಗಿಸುವ ಬಾಲಿನಂತಿದೆ. ಕರಾವಳಿ ಪ್ರದೇಶದಲ್ಲಂತೂ ಇದರದ್ದೇ ಕಾರುಬಾರು. ಯಾವ ಹೋಟೆಲಲ್ಲೂ ನೋಡಿದ್ರೂ ಇದರ ಹೆಸ್ರು ಇದ್ದೇ ಇರಯತ್ತದೆ. ಇದು ಇಲ್ಲಾಂದ್ರೆ ಮಾಲಿಕರಿಗೆ ಅಂದು ಲಾಭವೇ ಇಲ್ಲ. ಹೆಸ್ರು ಕೇಳುವಾಗ ನಗು ಬರುತ್ತೆ. ಪುಂಡಿ, ಪಿಂಡಿ, ಕಡುಬು, ಮುಟ್ಲಿ ಹಾಗೂ ಮುಂತಾದ ಹೆಸ್ರಲ್ಲಿ ಇದನ್ನು ಕರೆಯುತ್ತಾರೆ. ಅಕ್ಕಿಯ ಹಿಟ್ಟನ್ನು ಚೆನ್ನಾಗಿ ಕಲಸಿ ನಂತರ ಅದನ್ನು ಬಾಲಿನ ರೂಪಕ್ಕೆ ತಂದು ಬೇಯಿಸುತ್ತಾರೆ. ಇದನ್ನು ಬೇಯಿಸಲೆಂದೇ ವಿಶೇಷ ಪಾತ್ರೆ ಇದೆ. ಇದರ ತಳ ಭಾಗದಲ್ಲಿ ನೀರು ತುಂಬಿಸಿ ಮಧ್ಯ ಭಾಗದಲ್ಲಿ ಒಂದು ಮುಚ್ಚಲೆ ಇಟ್ಟು ನಂತರ ಪುಂಡಿಗಳನ್ನು ಇಟ್ಟು ಬೇಯಿಸುತ್ತಾರೆ. ಬೇಯಿಸುವಾಗ ತಳಬಾಗದಲ್ಲಿರುವ ನೀರು ಕುದಿಯುವಾಗ ಕಡುಬಿನ ಸುವಾಸನೆ ನಿಜಕ್ಕೂ  ಅದ್ಭುತವಾಗಿರುತ್ತದೆ. ಯಾವಾಗೊಮ್ಮೆ ಕೈಗೆ ಸಿಗುತ್ತದೆ ಎಂದು ಕಾತುರದಿಂದ ಕಾಯುತ್ತೇವೆ. ಕಡುಬು ಆಕಾರ, ಶೈಲಿ, ರುಚಿ ಎಲ್ಲವು ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಇರುತ್ತದೆ. ಕೆಲವೊಂದು ಮನೆಗಳಲ್ಲಿ  ಕೂಡಾ ಅವರದ್ದೇ ಆದ ಆಕಾರ, ಶೈಲಿ ಇರುತ್ತದೆ. ಕಡುಬಿನ ಗುಣಮಟ್ಟವೂ ಅದರ ರೂಪದ ಮೇಲೆ ಅವಲಂಬಿತವಾಗಿರುತ್ತದೆ. ತಯಾರಿಸಲು ಪ್ರತ್ಯೇಕ ಅನುಭವವೋ ಅಥವಾ ಟ್ರೈನಿಂಗ್ ಬೇಕಾಗಿಲ್ಲ. ಒಮ್ಮೆ ನೋಡಿದ್ರೆ ಸಾಕು ಮ...

wow! yummy

          ವಾ.... ಇಡ್ಲಿ  ವಡೆ ಸಾಂಬಾರ್ ಇಡ್ಲಿ-ವಡೆ ಸಾಂಬರ್ ಆಹಾ ನೆನೆಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ......ಅಬ್ಬಾ ಎಂತಹ ಕಾಂಬಿನೇಷನ್ ಅಲ್ವಾ , ಇಡ್ಲಿ ಮತ್ತೆ ವಡೆಯದ್ದು. ಯಾವುದೇ ಸಮಾರಂಭ ಆದರೂ ಮೊದಲಿಗೆ ನೆನಪಾಗುವುದು ಇಡ್ಲಿ ವಡೆ. ಯಾವ ಫಾಸ್ಟ್-ಫುಡ್ ತಿಂಡಿಯ ಮುಂದೆ ಇಡ್ಲಿಗೆ ಸರಿಸಾಟಿ ಯಾವುದೂ ಇಲ್ಲ. ಅಬ್ಬಾ ಅದರ ರುಚಿ ನೆನೆಸಿಕೊಂಡರೆ ನಾಲಿಗೆ ನೀರೂರುತ್ತದೆ.   ಇಡ್ಲಿಯನ್ನು , ವಡೆಯನ್ನು ಸೇರಿಸಿ ಅದಕ್ಕೆ ಸಾಂಬಾರ್ ಹಾಕಿ ಮಿಕ್ಸ್ ಮಾಡಿ ತಿಂದ್ರಂತೂ , ಆಹಾ  ಯಾವ ಅಮೃತಕ್ಕೂ ಕಡಿಮೆ ಇಲ್ಲಾ. ಈಗಲೂ ಅದೆಷ್ಟೋ ಜನರಿದ್ದಾರೆ ಹೋಟೆಲಿಗೆ ಹೋಗಿಯೇ ಇಡ್ಲಿ-ವಡೆ ತಿನ್ನುವವರು. ನಾನು ಮನೆಗೆ ಹೋಗುವಾಗ ಮನೆ ಹತ್ತಿರದ ಹೋಟೆಲಿನ ಇಡ್ಲಿ-ವಡೆಯ ಪರಿಮಳವೂ ನೇರವಾಗಿ ನನ್ನನ್ನು ಹೋಟೆಲ್ ಬಳಿಗೆ ಕಳಿಸುವಂತೆ ಮಾಡುತ್ತದೆ.     ಕಿಲಾಡಿ-ಜೋಡಿ ಅವಾರ್ಡ ಏನಾದರೂ ಮಾಡಿದ್ರೆ ಅದು ಇಡ್ಲಿ-ವಡೆಗೆಯೇ ಸಿಗುತ್ತದೆ. ಯಾಕಂದ್ರೆ ನೀವು ಯಾವ ನೂಡಲ್ಸ್ , ಸಾಸ್ , ಪಿಝ್ಝ , ಬರ್ಗರ್ , ಬೇಕಾದ್ರು ತಿನ್ನಿ ಅದರಲ್ಲಿ ನಿಮಗೆ ಸಿಗುವ ತೃಪ್ತಿಗಿಂತ ಬರೀ ಇಡ್ಲಿ- ವಡೆಯ ಸ್ವಾದವೇ ಬೇರೆ. ಅಷ್ಟೇ ಅಲ್ಲ ಇಡ್ಲಿ-ವಡೆ ಬಂದಿರುವುದು ನಮ್ಮ ಪೂರ್ವಕಾಲದಿಂದ. ಮನೆಯಲ್ಲೇ ತಯಾರು-ಮಾಡಿ ತಿನ್ನಬಹುದಾದಂಥದ್ದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬರುವುದಿಲ್ಲ. ಎಷ್ಟು ರುಚಿಯೋ ಅಷ್...

write up

ಮನಸ್ಸರಳಿಸುವ ಮನೀಷಾ ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಂದರೆ ಅದು ಅವಕಾಶಗಳ ಸಾಗರವಿದ್ದಂತೆ. ಇಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಭಿವ್ಯಕ್ತ ಪಡಿಸಲು ಅನೇಕ ಅವಕಾಶಗಳಿವೆ. ಅದರಲ್ಲಿ ಬಹಳ ಪ್ರಮುಖವೆಂದರೆ ಕಾಲೇಜಿನ ಎಲ್ಲ ಕಾರ್ಯಚಟುವಟಿಕೆಗಳನ್ನು, ವಿದ್ಯಾರ್ಥಿ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವುದರ ಮೂಲಕ ಎಲ್ಲರ ಮನಸ್ಸನ್ನು ಅರಳಿಸುವ ಮನೀಷಾ ಇದು ನಮ್ಮ ಕಾಲೇಜಿನ ಸವಿವರಗಳನ್ನು ತೆರೆದಿಡುವ ವಾರ್ಷಿಕ ಸಂಚಿಕೆ.        ವಿದ್ಯಾರ್ಥಿಗಳ ಪ್ರತಿಭೆಗೆ ಕೈಗನ್ನಡಿಯಂತೆ ಇರುವ ಮನೀಷಾ ನಾಡಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾದುದು. ಇಲ್ಲಿ ಪ್ರಾಧ್ಯಾಪಕರ ಶ್ರಮ ,ವಿದ್ಯಾರ್ಥಿಗಳ ಪರಿಶ್ರಮ ಗಮನಿಸಬೇಕಾದ ಅಂಶ. ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕಾಲೇಜುಗಳು ಇದ್ದು ಇವುಗಳೆಲ್ಲವೂ ಕೂಡ ತಮ್ಮ ವಾರ್ಷಿಕ ಸಂಚಿಕೆಯನ್ನು ಸ್ಪರ್ಧೆಗಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತವೆ. ಆದರೂ ಕೂಡ ಹೆಚ್ಚಿನ ಭಾರಿ ಪ್ರಥಮ ಬಹುಮಾನವನ್ನು ಬಾಚಿರುವುದು ಮನೀಷಾ ಎಂಬುದು ನಮ್ಮೆಲ್ಲರ ಹೆಮ್ಮೆ.    ಮನೀಷಾ ಎಂಬುದು ಬೌದ್ಧಿಕ ಚಟುವಟಿಕೆ .ಇದರಲ್ಲಿ ವಿದ್ಯಾರ್ಥಿಗಳ    ಸಾಂಸ್ಕೃತಿಕ ,ಸಾಹಿತ್ಯಿಕ, ಕ್ರೀಡಾ ಹಾಗೂ ಶೈಕ್ಷಣಿಕ ಸಾಧನಾ ವಿವರಗಳನ್ನು ಅಲ್ಲದೆ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಯಾವೆ...