Skip to main content

Posts

Showing posts from July, 2017

Kavana

ಅವರಿವರಂತೆ ಮಾರ್ಗ ಸುಗಮವಾಗಿತ್ತು,  ಹಿಂದೆ ಸಾಗುತ್ತಿದ್ದ ದಾರಿಗೆ ಲೆಕ್ಕವೇ ಇರಲಿಲ್ಲ  ಮುಂದೆ ಕಾಣುತ್ತಿದ್ದ ದಾರಿಯ ಅಳತೆ ತಿಳಿದಿರಲಿಲ್ಲ.  ಹೊರಟವರು ಸಾಗುತ್ತಲೇಯಿದ್ದೆವು,  ಕೆಲವರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದೆವು ಕೆಲವರು ನ್ಮಮ್ಮನ್ನು ಹಿಂದಿಕ್ಕಿ ನುಗ್ಗುತ್ತಿದ್ದರು, ಕೆಲವರು ಸಾಕೆಂದು ಹಿಂದಿರುಗುತ್ತಿದ್ದರು, ಆದರೆ ನಮಗವರನ್ನು ಗಮನಿಸುವ ಸಮಯವಿಲ್ಲ ಗಮನಿಸಿದರೂ ಬದಲಾಗುವಂತಹದ್ದು ಏನೂ ಇಲ್ಲ ಅವರೂ ನಮ್ಮಂತೆಯೇ, ನಾವೂ ಅವರಂತೆಯೇ. SAMPADA.S.SBHAGAVATH SECOND YEAR JOURNALISM 7760396839

feature: Sutturu jatra mahotsava

ಜನಮನ ಸೆಳೆಯುವ ಸೊಬಗಿನ ಜಾತ್ರೆ ಜನವರಿಯಲ್ಲಿ ಆರು ದಿನ ಜರಗುವ ಸುತ್ತೂರು ಜಾತ್ರೆ ಸಾಂಸ್ಕೃತಿಕ, ಐತಿಹಾಸಿಕ, ಜನಪದದ ಹಲವಾರು ಚಿತ್ರಣವನ್ನು ಕೊಡುತ್ತದೆ. ಜಾತ್ರೆ ಎಂದ ತಕ್ಷಣ ನಮ್ಮೆಲ್ಲರ ಚಿತ್ರಣಕ್ಕೆ ಬರುವುದೇ ತೇರು , ಜನ ಜಂಗುಳಿ, ವಸ್ತು ಮಳಿಗೆ,ತಿಂಡಿ ಅಂಗಡಿ, ಪುಸ್ತಕಗಳ ಮಳಿಗೆ, ಹೀಗೆ ಹೆಚ್ಚು ಹಲವು ದೇಸಿಯ ಚಿತ್ರಣ ಮೂಡುತ್ತದೆ. ಅಯಾ ದೇಗುಲಗಳ ಪುರಾತನ ಪರಂಪರೆಯಿಂದ ನಡೆದು ಬಂದ ಸಂಪ್ರದಾಯದ ಪ್ರಕಾರ ಹಲವಾರು ಜಾಗಗಳಲ್ಲಿ, ಹಲವಾರು ಊರು . ಹಳ್ಳಿಗಳಲ್ಲಿ ಜಾತ್ರೆಯು ನಡೆದು ಬಂದಿರುತ್ತದೆ. ಇದಕ್ಕೆ ಸುತ್ತೂರು ಮಠ ಓಂದು ನಿದರ್ಶನವಾಗಿ ನಿಂತಿದೆ. ನಂಜನಗೂಡು ತಾಲೂಕು ಮೈಸೂರು ಜಿಲ್ಲೆಯ ಕಪಿಲಾನದಿ ತೀರದಲ್ಲಿರುವ ಸತ್ತೂರು ಎಂಬ ಹಳ್ಳಿಯಲ್ಲಿ ಮಠದ ಸ್ಥಾಪನೆಯಾಗಿದೆ. ಸುತ್ತೂರು ಶ್ರೀಕ್ಷೇತ್ರವನ್ನು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ತಮ್ಮ ತಪಸ್ಸಿದ್ಧಿಯಿಂದ ೧೯೫೪ರಲ್ಲಿ ನೆಲೆಗೊಳಿಸಿದರು. ಈ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಜಾತ್ರೆನಡೆಯುತ್ತದೆ.೫೦ ರಿಂದ ೬೦ವರ್ಷಗಳಿಂದ ನಡೆದು ಬಂದಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜನವರಿ ತಿಂಗಳಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯುತ್ತದೆ. ಪ್ರತೀ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭವಾಗುತ್ತದೆ.  ಜನವರಿಯಲ್ಲಿ,ಆರು ದಿನ ಜರುಗುವ ಈ ಜಾತ್ರೆಯು ಜನಪದ, ಸಾಂಸ್ಕೃತಿಕ, ಐತಿಹಾಸಿಕದ ಹಲವಾರು ವಿಚಾರಗಳ ಚಿತ್ರಣವನ್ನು ಕೋಡುತ್ತದೆ.ವಿವಿಧ ...

STORY OF FIRSTS

STORY OF FIRSTS ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸದಾ ಹೊಸ ಪ್ರಯೋಗಗಳೊಂದಿಗೆ ಸುದ್ದಿಯಲ್ಲಿರುತ್ತದೆ. ಇಂತಹ ನವನವೀನ ಪ್ರಯೋಗಗಳನ್ನು First ಮಾಡಿದವರು ಹೆಸರುವಾಸಿಯಾಗುತ್ತಾರೆ. ನಮ್ಮ ಕಾಲೇಜಿನಲ್ಲಿ ತಯಾರಿಸಿದ First ಕಿರುಚಿತ್ರ, ಸಾಕ್ಷ್ಯ ಚಿತ್ರ. ಫೊಟೊ ಫೀಚರ್,  ಚಿಗುರು ಮುದ್ರಿತ ಪುಸ್ತಕ, ನಮ್ಮೂರ ವಾರ್ತೆಯ first ವಾರ್ತಾವಾಚಕಿ, first ಬ್ಲಾಗ್ ಹೀಗೆ ಈ ಮೊದಲ್ಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ, ನಿರ್ಮಾತೃಗಳ ಬೆನ್ನುಹತ್ತಿ ನಿಮ್ಮೆದುರು ಪೂರಕವಾದ ಮಾಹಿತಿಯನ್ನು ಒಪ್ಪಿಸುತ್ತಿದ್ದೇವೆ. Karthik Paradkar Divyashree  

BOQUE PREPARATION- EASY STEPS

ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ?  ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?!  ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ  ಸಂದರ್ಭಗಳಲ್ಲಿ  ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?  ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...

write up about friendship

                                 ಭೇಧವಿರದ ಬಾಂಧವ್ಯದ ಬೆಸುಗೆ...... .     ಈಗಿನ ಕಾಲದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಮ್ಮರವಾಗ್ತಾ ಇದೆ.ಇಂಥಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ,ಕೇವಲ ಸ್ಪರ್ಧೆಯಾಗಿ ಉಳಿದಿಲ್ಲ.ನಾನು ಮುಂದೆ ಬರಬೇಕು ಅನ್ನೊ ಸ್ವಾಭಿಮಾನಕ್ಕಿಂತ,ಬೇರೆಯವರನ್ನ ಹೇಗೆ ಹಿಂದೆನೇ ತಳ್ಳಬೇಕು ಅನ್ನೋ ಸ್ವಾರ್ಥ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.ಇದರಿಂದ ಗೆಳೆತನ,ಹಗೆತನಕ್ಕೆ ತಿರಗ್ತಾ ಇದೆ.ನಮ್ಮ- ನಮ್ಮಲ್ಲಿನ ಸ್ಪರ್ಧೆ "ನನ್ನ" ಜೊತೆಗೆ ಇತರರನ್ನೂ ಬೆಳೆಸ್ಬೇಕೆ ಹೊರತು,ಇಂತಹ ಋಣಾತ್ಮಕ ಸ್ಪರ್ಧೆಯಿಂದ "ನನ್ನವರನ್ನ" ಕಳಕೊಳೊ ಹಾಗೆ ಮಾಡಬಾರದು.       ಇಲ್ಲೊಂದು ಪುಟ್ಟ ಕಥೆ ಇದೆ. ೪ ಜನ ಬೆಸ್ಟ್ ಫ್ರೆಂಡ್ಸ್‌ಗಳ ತಮ್ಮದೇ ಸುಂದರವಾದ ಪುಟ್ಟ ಜಗತ್ತು. ನಾಲ್ಕೂ ಜನರೂ ತಮ್ಮದೇ ರೀತಿಯಲ್ಲಿ ಭಿನ್ನವಾಗಿದ್ದಾರೆ.ಒಬ್ಬಳು ತುಂಬಾ ಚೆಂದವಾಗಿ ಹಾಡ್ತಾಳೆ. ಡೀಸೆಂಟ್ ಹುಡುಗಿ. ಇನ್ನೊಬ್ಬ ಕಂಪ್ಯೂಟರ್, ಮೊಬೈಲ್‌ಗಳ ಎಲ್ಲಾ ಚಿಠಿಠಿsಗಳನ್ನ ಅರಿದು ಕುಡಿದಿದಾನೆ, ಹಾಗೆನೇ ಅಂದವಾಗಿ ಪೇಂಟಿಂಗ್ ಕೂಡಾ ಮಾಡ್ತಾನೆ.ಈ ಗುಂಪಿನ ಟೆಕ್ನಿಷಿಯನ್....

write up about First speech

ಪಸ್ಟ್ ಸ್ಪೀಚ್ ಎಂಬ ಬೆಸ್ಟ್ ಪರಂಪರೆ ಪತ್ರಕರ್ತನಾಗ ಬೇಕೆಂಬ ಹಂಬಲ ಅದರೊಂದಿಗಿಷ್ಟು ಕ್ರಿಯಾತ್ಮಕ ಬರವಣಿಗೆ ನಿರರ್ಗಳವಾದ ಮಾತುಗಾರಿಕೆ ಪೊಟೋಗ್ರಫಿ ಮೇಲೆ ಹಿಡಿತ ಸಾಧಿಸಬೇಕೆಂಬ ಛಲದೊಂದಿಗೆ ನಾನು ಆಯ್ಕೆ ಮಾಡಿಕೊಂಡ ಕಾಲೇಜು ಎಸ್.ಡಿ.ಎಂ ಉಜಿರೆ. ನಮ್ಮ ಪತ್ರಿಕೋದ್ಯಮ ತರಗತಿ ಅಲ್ಲಿ ಪಠ್ಯದ ಜೊತೆಗೆ ಮಾಧ್ಯಮ ಲೋಕದಲ್ಲಿ ಆಗುತ್ತಿರುವ ಆಗು ಹೋಗುಗಳು , ನಮ್ಮ   ಸುತ್ತಾ ಮುತ್ತದ ಸುದ್ದಿಗಳ ಬಗ್ಗೆ ಚರ್ಚೆಗಳು ನಡಿಯುತ್ತಲೇ ಇರುತ್ತದೆ. ತರಗತಿ ಆರಂಭವಾಗುವಕ್ಕಿಂತ ಮುಂಚೆ ದಿನಕೊಬ್ಬರಂತೆ ಯಾವುದಾದರು ಒಂದು ವಿಷಯದ ಬಗ್ಗೆ ೫ ನಿಮಿಷ ವೇದಿಕೆ ಹತ್ತಿ ಮಾತನಾಡಬೇಕು. ಅಂದು ಒಂದು ದಿನ ನಾನು ಬೆಳಗ್ಗೆ ಏಳುವಾಗಲೇ ತಡವಾಗಿತ್ತು , ಇಂದು ನನ್ನ ದಿನಚರಿ ಸರ್‌ನ ಬೈಗುಳದೊಂದಿಗೆ ಶುರುವಾಗುವುದೆಂದು ಅಂಜುತ್ತಲೇ ತರಗತಿಗೆ ತೆರಳಿದೆ. ಆದರೆ ಅಂದು ಆಗಿದ್ದೇ ಬೇರೆ ತರಗತಿಗೆ ಪ್ರಾಧ್ಯಪಕರು ಅವಗತಾನೆ ಬಂದಿದ್ದರು , ಬದುಕಿತೋ ಬಡಜೀವವು ಅಂದುಕೊಳ್ಳುತ್ತಲೇ ಖಾಯಂ ಕುಳಿತುಕೊಳ್ಳುವ ಜಾಗದಲ್ಲಿ ಕುಳಿತುಕೊಂಡೆ. ಸಂಕಟದಿಂದ ಪಾರು ಮಾಡಿದೆ ಗಣೇಶ ಅಂದುಕೊಳ್ಳುವಷ್ಟರಲ್ಲೇ ಪಕ್ಕದಲ್ಲೇ ಕುಳಿತ   ನನ್ನ  ಗೆಳೆಯನ ಅಶರೀರವಾಣಿ ಕೇಳಿಸಿತು , ಇವತ್ತು ನಿಂದೇ ಫಸ್ಟ್‌ಸ್ಪೀಚೆಂದು. ಮಾತುಗಾರಿಕೆಯೆಂದರೆ ನನಗೆ ಬಲು ಇಷ್ಟ ಆದರೆ ನನಗೆ ಸ್ವಲ್ಪ ಸ್ಟೇಜ್ ಫಿಯರ್ , ಸ್ಟೇಜ್ ಮೇಲೆ ಹತ್ತಿದರೆ ಸಾಕು ಹೇಳಬೇಕೆಂದುಕೊಂಡದ್ದೆಲ್ಲ ಮರೆತು ಹೋಗುತ್ತದೆ. ಪ್ರಾಧ...

ಸೇಡು

ಸೇಡು ಒಂದು ದಿನ ಬೆಳಿಗ್ಗೆ ಯಾವುದೇ ಕ್ಲಾಸ್ ಇಲ್ಲದೆ, ರೂಮ್‌ಗೆ ಹೋಗುವುದಕ್ಕೆ ಮನಸ್ಸು ಸಹ ಇಲ್ಲದೆ ಪೇಚಾಡಿ-ಪೇಚಾಡಿ ಲೈಬ್ರರಿಗೆ ಹೋಗುವುದೆಂದು ನಿರ್ಧರಿಸಿ ನಾನು ನನ್ನ ಫ್ರೆಂಡ ಲೈಬ್ರರಿಕಡೆ ಮುಖ ಮಾಡಿದೆವು. ಆಕ್ಷಣ ಕನ್ನಡದ ಒಂದು ಪದ್ಯದ ಮೇಲೆ ಬರೆಯುವುದಕ್ಕೆ ಹೇಳಿದ್ದ ಒಂದು ssಪ್ರಬಂಧದ ನೆನಪಾಯಿತು. ಸರಿಹಾಗಾದರೆ ಅದನ್ನೆ ಬರಿಯೋಣ ಎಂದು ಕನ್ನಡ ಬುಕ್ ಜೊತೆಗೆ ನಾಲಕ್ಕು ಬಿಳಿ ಹಾಳೆಗಳನ್ನು ತೆಗೆದುಕೊಂಡು ಲೈಬ್ರರಿಯ ಒಳಗೆ ಎಂಟ್ರಿ ಆದೆ.       ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಸೆಮಿಸ್ಟರ್‌ಗೆ ೪೦ ತಾಸು ಲೈಬ್ರರಿ ಬಳಸಬೇಕೆಂಬ ಕಡ್ಡಾಯ ನೀತಿ ಇತ್ತು. ಇದೇ ಕಾರಣ ಯಾರು ಯಾರು ಎಷ್ಟು ಲೈಬ್ರರಿ ಹವರ್ ಮಾಡಿದ್ದಾರೆಂದು ಲೆಕ್ಕ ಹಿಡಿಯುವುದಕ್ಕೆ ನಮ್ಮ ಐಡಿ ಕಾರ್ಡ್‌ಗಳಲ್ಲಿ ಬಾರ್‌ಕೋಡ್ ಅಳವಡಿಸಿದ್ದರು. ಇದನ್ನು ಸ್ಕಾನ್ ಮಾಡುವುದಕ್ಕೆ ಲೈಬ್ರರಿ ದ್ವಾರದಲ್ಲಿ ಬಾರ್‌ಕೋಡ್ ಸ್ಕಾನರ್ ಇತ್ತು. ಇಲ್ಲಿ ಸ್ಕಾನ್ ಮಾಡಿ ನಾವು ಒಳಗೆ ಒಯ್ಯುತಿರುವ ವಸ್ತುವನ್ನು ಪರಿಶೀಲಿಸಿ ಅಪ್ಪಣೆ ಕೊಡುತಿದ್ದರು. ನನಗೆ ಇಲ್ಲಿ ಒದಗಿ ಬಂದ ಬಿಕ್ಕಟ್ಟೆಂದರೆ ಪ್ರಿಂಟೆಡ್ ಬುಕ್ ಒಳಗೆ ತೆಗೆದುಕೊಂಡು ಹೋಗಲು ಸ್ಕಾನರ್ ಬಳಿ ಕುಳಿತಿದ್ದ ರಮೇಶ್ ಸರ್ ಬಿಡಲೇ ಇಲ್ಲ. ಒಳಗಡೆ ಈ ಬುಕ್‌ನ ಬೇರೆ ಪ್ರಿಂಟ್ ಇರಲಿಲ್ಲ. ಹಾಗಾಗಿ ನನಗೆ ಆ ಬುಕ್ ಒಳಗೆ ತೆಗೆದುಕೊಂಡು ಹೋಗದೆ ಬೇರೆವಿಧಿಯೇ ಇರಲಿಲ್ಲ. ಹೇಗಾದರು ಮಾಡಿ ಒಳಗೆ ತ...

Bonsai- a small feature.

ಕುಬ್ಜ ಸಸ್ಯ ಬೊನ್ಸಾಯ್ Bonsai tree. ಬೋನ್ಸಾಯ್ ಎಂದೊಡನೆ ಎಲ್ಲರೂ ಕುತೂಹಲದಿಂದ ಕಣ್ಣರಳಿಸುತ್ತಾರೆ. ಸಾಮಾನ್ಯವಾಗಿ ಅಲಂಕಾರಕ್ಕಾಗಿ ಬಳಸುವ ಜೊತೆಗೆ ಎಲ್ಲರನ್ನೂ ತನ್ನತ್ತ ಸೆಳೆಯುವ ಸಸ್ಯ ಬೋನ್ಸಾಯ್. ಇದೊಂದು ಕುಬ್ಜ ಸಸ್ಯ ಪ್ರಕಾರ ಎಂದು ಹೆಸರಾಗಿದೆ. ಧಾರಕಗಳಲ್ಲಿ ಬೆಳೆಯುವ ಮರಗಳನ್ನು ಬಳಸಿಕೊಂಡ ಜಪಾನಿನ ಕಲಾ ಪ್ರಕಾರವಾಗಿದೆ. ಇದೇ ಆಚರಣೆಗಳು ಚೀನೀ ಸಂಪ್ರದಾಯದಲ್ಲಿ ಸೇರಿದಂತೆ ಇತರೆಡೆಯೂ ಅಸ್ತಿತ್ವದಲ್ಲಿದೆ. ಜಪಾನೀಸ್ ಸಂಪ್ರದಾಯದಂತೆ ಬೆಳೆಸುವ ಬೋನ್ಸಾಯ್ ನೂರು ವರ್ಷಗಳಿಗಿಂತಲೂ ಹಳೆಯ ಪರಂಪರೆಯನ್ನು ಹೊಂದಿದೆ. ಇದರ ಚೀನೀ ಪದ ಪೆನ್ಜಯ್. ಇಂಗ್ಲಿಷ್‌ನಲ್ಲಿ ಇದನ್ನು ಬೋನ್ಸಾಯ್ ಎನ್ನುತ್ತಾರೆ. ಇದರ ಅರ್ಥ ಕುಂಡಗಳಲ್ಲಿ ಚಿಕಣಿ ಮರಗಳು ಎಂದು. ಬೋನ್ಸಾಯ್ ಸುಮಾರು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ ಹುಟ್ಟಿತೆಂದು ನಂಬಲಾಗಿದೆ. ಹಾನ್ ರಾಜವಂಶದವರು ಮರದ ಟ್ರೆಗಳು ಅಥವಾ ಸುಟ್ಟ ಜೇಡಿಮಣ್ಣಿನ ಮಡಕೆಗಳಲ್ಲಿ ಈ ರೀತಿಯ ಕೃಷಿ ಮಾಡುವ ಅಭ್ಯಾಸ ಹೊಂದಿದ್ದರು. ಅವರು ಇದಕ್ಕೆ ಪೆಂಜಾಯ್ ಎಂದು ಕರೆಯುತ್ತಿದ್ದರು. ಇತರ ಸಸ್ಯಗಳಂತೆ ಬೋನ್ಸಾಯ್ ಆಹಾರ ಉತ್ಪಾದನೆ ಅಥವಾ ಔಷಧಿ ಉದ್ದೇಶ ಹೊಂದಿಲ್ಲ. ಬದಲಿಗೆ ಇದು ಧೀರ್ಘಕಾಲದ ಕೃಷಿ ಚಟುವಟಿಕೆಯ ಭಾಗವಾಗಿದೆ. ಬೋನ್ಸಾಯ್ ಬೆಳೆಸುವುದು ಚಿಕ್ಕ ಕುಂಡಗಳಲ್ಲಿ. ನಿಮ್ಮ ಪರಿಸರಕ್ಕೆ ಸರಿಯಾಗಿ ತಳಿಗಳ ಆಯ್ಕೆ ಜೊತೆಗೆ ಮೂಲಭೂತ ಮಾರ್ಗಸೂಚಿಗಳವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಬೋನ್ಸಾಯ್ ಮರಗಳನ್ನು...

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

Antharangadalli Aksharadhama

ಅಂತರಂಗದಲಿ ಅಕ್ಷರಧಾಮ ದೇಗುಲದ ಹೊರನೋಟ ಎತ್ತ ನೋಡಿದರೂ ಕೆತ್ತನೆಗಳು... ಅದ್ಭುತ ಎನಿಸುವ ವಿನ್ಯಾಸ, ವಿಶ್ವಕರ್ಮನೇ ಧರೆಗಿಳಿದು ಬಂದು ಸೃಷ್ಟಿಸಿದಂತೆ ಭಾಸವಾಗುವ ವೈಭವದ ಆವರಣ.... ಇದೆಲ್ಲಾ ಕಾಣಸಿಗುವುದು ಆಧ್ಯಾತ್ಮಿಕ-ಸಾಂಸ್ಕೃತಿಕ ತಾಣವೆಂದು ಪ್ರಸಿದ್ಧಿ ಪಡೆದಿರುವ ಶಿಲ್ಪಕಲೆಗೆ ದ್ಯೋತಕದಂತಿರುವ ನವದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ. ದೆಹಲಿಯ ಶೇ.೭೦ರಷ್ಟು ಪ್ರವಾಸಿಗರನ್ನು ಆಕರ್ಷಿಸುವ ಈ ಭವ್ಯವಾದ ದೇಗುಲದ ನಿರ್ಮಾತೃ ಸ್ವಾಮಿ ಮಹಾರಾಜ್. ಆಚಾರ್ಯ ಸ್ವಾಮಿ ನಾರಾಯಣರಿಗೆ ಈ ದೇವಾಲಯವನ್ನು ಅರ್ಪಣೆ ಮಾಡಲಾಗಿದೆ. ೨೦೦೫ ನವೆಂಬರ್ ೬ರಂದು ಡಾ|ಎ.ಪಿ.ಜೆ ಅಬ್ದುಲ್ ಕಲಾಂ ಅಕ್ಷರಧಾಮವನ್ನು ಉದ್ಘಾಟಿಸಿ ಭಾರತಕ್ಕೆ ಅರ್ಪಿಸಿದರು. ಅಭಿಷೇಕ ಮಂಟಪ,  ಆಕರ್ಷಕ ಉದ್ಯಾನವನ, ಸಹಜಾನಂದ ದರ್ಶನ (ಮೌಲ್ಯಗಳ ದರ್ಶನ), ನೀಲಕಂಠ ದರ್ಶನ(ಸ್ವಾಮಿ ನಾರಾಯಣರ ಯೌವ್ವನದ ಕಾಲಾವಧಿಯ ಅನಾವರಣ) ಸಂಸ್ಕೃತಿ ದರ್ಶನ( ಸಾಂಸ್ಕೃತಿಕ ದೋಣಿ ವಿಹಾರ) ಎಂಬ ಮೂರು ವಿಭಿನ್ನ ಪ್ರದರ್ಶನಗಳು ಅಕ್ಷರಧಾಮದ ಪ್ರಮುಖ ಆಕರ್ಷಣೆ.  ಸ್ವಾಮಿನಾರಾಯಣರ ಧರ್ಮಚಿಂತನೆಯ ಪ್ರಕಾರ ಅಕ್ಷರಧಾಮವೆಂದರೆ ದೇವರು ವಾಸಿಸುವ ಸ್ಥಳ ಹಾಗು ಭೂಮಿಯ ಮೇಲೆ ಪರಮಾತ್ಮ ಇರಲು ಇರುವ ತಾಣ ಎಂದು ಭಕ್ತಾದಿಗಳು ನಂಬಿದ್ದಾರೆ. ಅಕ್ಷರಧಾಮ ಮಂದಿರ ಅಕ್ಷರಧಾಮ ದೇಗುಲದ ಪ್ರಮುಖ ಆಕರ್ಷಣೆಯೆಂದರೆ ಅಕ್ಷರಧಾಮ ಮಂದಿರ. ಸುಮಾರು ೪೩ ಮೀ ಎತ್ತರ, ೯೬ ಮೀ ಅಗಲ, ೧೦೯ ಮೀ ಉದ್ದವಿರುವ ಅಕ್ಷರಧಾಮ ಮಂದಿರವು ವ...